ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ‘ಶಕ್ತಿ’ ಯೋಜನೆಯನ್ನು ಕಾಂಗ್ರೆಸ್, ತಾನು ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೆ ತಂದಿದೆ. ಈ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಸಿಗುತ್ತಿದ್ದು, ಈಗಾಗಲೇ ಕೋಟ್ಯಾಂತರ ಮಂದಿ ಇದರ ಲಾಭ ಪಡೆದಿದ್ದಾರೆ.
ಜೂನ್ 11ರ ಮಧ್ಯಾಹ್ನ 1 ಗಂಟೆಯಿಂದ ಇದು ಜಾರಿಗೆ ಬಂದಿದ್ದು, 14 ದಿನಗಳಲ್ಲಿ ಅಂದರೆ ಜೂನ್ 24ರ ಶನಿವಾರ ರಾತ್ರಿ ಹನ್ನೆರಡು ಗಂಟೆಯವರೆಗೆ ಶಕ್ತಿ ಯೋಜನೆಯ ಅಡಿ 7.15 ಕೋಟಿ ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ.
ಮಹಿಳೆಯರು ಉಚಿತವಾಗಿ ಸಂಚರಿಸಿದ ಟಿಕೆಟ್ ಗಳ ಮೌಲ್ಯ ಒಟ್ಟು 166,09,27,526 ರೂಪಾಯಿಗಳಾಗಿದ್ದು, ಈ ಪೈಕಿ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ 2,08,84,860 ಮಹಿಳೆಯರು ಪ್ರಯಾಣಿಸಿದ್ದು ಟಿಕೆಟ್ ಮೌಲ್ಯ 62,08,10,316 ರೂಪಾಯಿಗಳಾಗಿದೆ.
ಇನ್ನು ಬಿಎಂಟಿಸಿ ಬಸ್ ಗಳಲ್ಲಿ 2,39,07,381 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಟಿಕೆಟ್ ಮೌಲ್ಯ 29,64,30,431 ರೂಪಾಯಿಗಳಾಗಿದೆ. NWKRTC ಬಸ್ಸುಗಳಲ್ಲಿ 1,72,86,040 ಮಹಿಳೆಯರು ಸಂಚರಿಸಿದ್ದು ಇದರ ಟಿಕೆಟ್ ಮೌಲ್ಯ 43,30,64,686 ರೂಪಾಯಿಗಳಾಗಿದ್ದರೆ, KKRTC ಬಸ್ಸುಗಳಲ್ಲಿ 94,80,494 ಮಹಿಳೆಯರು ಪ್ರಯಾಣಿಸಿದ್ದು ಇದರ ಟಿಕೆಟ್ ಮೌಲ್ಯ 31,06,22,093 ರೂಪಾಯಿಗಳಾಗಿದೆ.