
ಬೆಂಗಳೂರು: ವ್ಹೀಲಿಂಗ್ ಹುಚ್ಚಿಗೆ ಬಿದ್ದು, ಬೈಕ್ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಬೈಕ್ ಕಳ್ಳನನ್ನು ಬೆಂಗಳೂರು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ವ್ಹೀಲಿಂಗ್ ಗಾಗಿಯೇ ಬರೋಬ್ಬರಿ 80ಕ್ಕೂ ಹೆಚ್ಚು ಬೈಕ್ ಗಳನ್ನು ಈ ಖತರ್ನಾಕ್ ಕಳ್ಳ ಕದ್ದಿದ್ದ ಎನ್ನಲಾಗಿದೆ.
ಬಂಧಿತ ಆರೋಪಿಯನ್ನು ಅರ್ಬಾನ್ ಅಲಿಯಾಸ್ ಶಕ್ತಿಮಾನ್ ಎಂದು ಗುರುತಿಸಲಾಗಿದೆ. 65ಕ್ಕೂ ಹೆಚ್ಚು ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಅರ್ಬಾನ್ ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅರ್ಬಾನ್ ಜೈಲಿನ ಆವರಣದಲ್ಲೇ ಇದ್ದ ಬೈಕ್ ಕದ್ದು, ಅದೇ ಬೈಕ್ ನಲ್ಲಿ ಮನೆಗೆ ಬಂದಿದ್ದ.
ನಾಯಕತ್ವ ಬದಲಾವಣೆ ಖಚಿತ…? ದೆಹಲಿಗೆ ದೌಡಾಯಿಸಿ ವರಿಷ್ಠರ ಭೇಟಿಯಾದ ಯೋಗಿ
ಇದೀಗ ಮತ್ತೆ 20ಕ್ಕೂ ಹೆಚ್ಚು ಬೈಕ್ ಕದ್ದ ಆರೋಪ ಅರ್ಬಾನ್ ವಿರುದ್ಧ ಕೇಳಿಬಂದಿದ್ದು, ತಿಲಕ್ ನಗರ, ಸುದ್ದಗುಂಟೆಪಾಳ್ಯ, ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣ ಸಂಬಂಧ ಇದೀಗ ಅರ್ಬಾನ್ ಹಾಗೂ ಆತನಿಗೆ ಸಾಥ್ ನೀಡುತ್ತಿದ್ದ ಮೊಹಮ್ಮದ್ ಅನೀಸ್ ನನ್ನು ಬಂಧಿಸಿರುವ ತಿಲಕ್ ನಗರ ಠಾಣೆ ಪೊಲೀಸರು ಇಬ್ಬರನ್ನೂ ಜೈಲಿಗಟ್ಟಿದ್ದಾರೆ ಬಂಧಿತರಿಂದ 13 ಬೈಕ್ ವಶಕ್ಕೆ ಪಡೆಯಲಾಗಿದೆ.
ಅನೈತಿಕ ಸಂಬಂಧ ಶಂಕೆಯಿಂದ ಪತಿ, ಅಪ್ರಾಪ್ತ ಮಗನಿಂದಲೇ ಘೋರ ಕೃತ್ಯ
ವ್ಹೀಲಿಂಗ್ ಗಾಗಿಯೇ ಬೈಕ್ ಕಳ್ಳತನಮಾಡುತ್ತಿದ್ದ ಅರ್ಬಾನ್, ಪೆಟ್ರೋಲ್ ಖಾಲಿಯಾಗುತ್ತಿದ್ದಂತೆ ಬೈಕ್ ನ್ನು ಎಲ್ಲೆಂದರಲ್ಲಿ ಬಿಟ್ಟು ಪರಾರಿಯಾಗುತ್ತಿದ್ದ.