ನಮ್ಮ ಪ್ರೀತಿ ಪಾತ್ರರಿಗೆ ಗುಲಾಬಿ ಹೂವನ್ನ ನೀಡೋದು ಬಹಳ ಹಿಂದಿನ ಕಾಲದಿಂದ ನಡೆದುಕೊಂಡು ಬರ್ತಿರುವ ಪದ್ಧತಿ. ನಮ್ಮ ಬಾಯಲ್ಲಿ ಹೇಳಲಾಗದ ವಿಚಾರವನ್ನ ಗುಲಾಬಿ ಹೂವಿನ ಬಣ್ಣ ಹೇಳುತ್ತೆ. ಹಾಗಾದ್ರೆ ಯಾವ ಬಣ್ಣದ ಹೂವು ಯಾವ ಸಂದೇಶ ಸಾರುತ್ತೆ ಅನ್ನೋದನ್ನ ತಿಳಿಯೋಣ.
ಕೆಂಪು ಗುಲಾಬಿ : ಎಲ್ಲರಿಗೂ ತಿಳಿದ ಹಾಗೆ ಕೆಂಪು ಗುಲಾಬಿ ಪ್ರೀತಿಯ ಸಂಕೇತ. ನೀವು ಯಾರನ್ನಾದರೂ ತುಂಬಾ ಪ್ರೀತಿಸುತ್ತಿದ್ದರೆ ಅವರಿಗೆ ಕೆಂಪು ಗುಲಾಬಿ ನೀಡೋಕೆ ಮರೆಯದಿರಿ.
ಬಿಳಿ ಗುಲಾಬಿ : ಕ್ರಿಶ್ಚಿಯನ್ ಕುಟುಂಬದ ಮದುವೆಗೆ ನೀವು ಹೋಗಿದ್ರೆ ಅಲ್ಲಿ ಬಿಳಿ ಬಣ್ಣದ ಗುಲಾಬಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತೆ. ಬಿಳಿ ಬಣ್ಣದ ಗುಲಾಬಿ ಮುಗ್ದತೆ, ಅಸಾಮಾನ್ಯ ಪ್ರೀತಿಯ ಸಂಕೇತವಾಗಿದೆ. ನಿಮ್ಮ ಸ್ನೇಹಿತರು ನಿಮ್ಮೊಡನೆ ಕೋಪಗೊಂಡಿದ್ದರೆ ಅವರಿಗೆ ಬಿಳಿ ಗುಲಾಬಿ ನೀಡಿ ಕ್ಷಮೆಯಾಚಿಸಿ.
ಗುಲಾಬಿ ಬಣ್ಣದ ಗುಲಾಬಿ : ಯಾರನ್ನಾದರೂ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೀರಿ ಅಂದರೆ ಅವರಿಗೆ ಪಿಂಕ್ ರೋಸ್ನ್ನು ನೀಡಿ. ಪಿಂಕ್ ರೋಸ್ ಆದ್ಯತೆಯ ಸಂಕೇತವಾಗಿದೆ.
ಹಳದಿ ಗುಲಾಬಿ : ಯಾರನ್ನಾದರೂ ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಲು ಬಯಸಿದ್ದರೆ ಅವರಿಗೆ ಈ ಹೂವನ್ನ ನೀಡಬಹುದು.
ನೇರಳೆ ಗುಲಾಬಿ : ಯಾರ ಮೇಲಾದರೂ ಮೊದಲ ನೋಟದಲ್ಲೇ ಪ್ರೀತಿಯಾಗಿದ್ದರೆ……ಅವರಿಗೆ ಈ ಬಣ್ಣದ ಗುಲಾಬಿ ನೀಡಿ. ನೇರಳೆ ಗುಲಾಬಿ ಆಕರ್ಷಣೆಯ ಸಂಕೇತವಾಗಿದೆ.
ಹಸಿರು ಗುಲಾಬಿ : ಆತ್ಮೀಯರಿಗೆ ನೀವು ಈ ಬಣ್ಣದ ಗುಲಾಬಿ ನೀಡಬಹುದು. ಇದು ಯಶಸ್ಸಿನ ಸಂಕೇತವಾಗಿದೆ.
ಕಪ್ಪು ಗುಲಾಬಿ : ಕಪ್ಪು ಬಣ್ಣದ ಗುಲಾಬಿಯಲ್ಲೇನಿದೆ ಎಂದು ಭಾವಿಸದಿರಿ. ಇದು ಶತ್ರುತ್ವದ ಸಂಕೇತವಾಗಿದೆ. ಹೀಗಾಗಿ ಯಾರಾದರೂ ನಿಮಗೆ ಈ ಬಣ್ಣದ ಹೂವನ್ನ ನೀಡಿದ್ದರೆ ಅವರನ್ನೂ ಮರೆಯದಿರಿ.