ತೂಕ ಕಡಿಮೆ ಮಾಡಿಕೊಳ್ಳಲು ನೀವೂ ಜಾಸ್ತಿ ಕಸರತ್ತು ಮಾಡ್ತಿದ್ದೀರಾ? ಎಷ್ಟೇ ವ್ಯಾಯಾಮ ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ವಾ? ವ್ಯಾಯಾಮ ಮಾಡೋದ್ರಿಂದ ತೂಕ ಕಡಿಮೆಯಾಗುವ ಬದಲು ಹೆಚ್ಚಾಗ್ತಾ ಇದೆ ಎಂಬ ಗೊಂದಲ್ಲ ನಿಮ್ಮಲ್ಲಿದ್ದರೆ ನೀವು ಮಾಡುವ ತಪ್ಪುಗಳೇ ಇದಕ್ಕೆ ಕಾರಣ.
ಜನರು ವ್ಯಾಯಾಮ ಮಾಡಲು ಶುರುಮಾಡಿದ ಆರಂಭಿಕ ದಿನಗಳಲ್ಲಿ ಅವರ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭಿಕ ದಿನಗಳಲ್ಲಿ ವ್ಯಾಯಾಮ ಮಾಡಿದಾಗ ಬರ್ನ್ ಆದ ಕ್ಯಾಲೋರಿಯಷ್ಟು ತೂಕ ಇಳಿಯೋದಿಲ್ಲ. ಈ ಬಗ್ಗೆ ನಡೆದ ಸಂಶೋಧನೆಯೊಂದು ನಾವು ಸೇವಿಸುವ ಆಹಾರ ಇದಕ್ಕೆ ಕಾರಣ ಎಂದಿದೆ.
ವ್ಯಾಯಾಮ ಮಾಡುವುದರಿಂದ ಹಸಿವು ಹೆಚ್ಚಾಗುತ್ತದೆ. ನಾವು ತಿನ್ನುವ ಪ್ರಮಾಣ ಜಾಸ್ತಿಯಾಗುತ್ತದೆ. ಅದ್ರಲ್ಲೂ ವ್ಯಾಯಾಮ ಶುರುಮಾಡಿದ ಆರಂಭಿಕ ದಿನಗಳಲ್ಲಿ ಹಸಿವಾಗುವ ಪ್ರಮಾಣ ಹೆಚ್ಚು. ಸ್ವಿಮ್ಮಿಂಗ್ ಮಾಡಿದಲ್ಲಿ, ಸೈಕಲ್ ಚಲಾಯಿಸಿದ್ರೆ, ಓಡಿದ್ರೆ ಹಸಿವಾಗುವ ಪ್ರಮಾಣ ಜಾಸ್ತಿ. ಹಸಿವಾಗ್ತಿದ್ದಂತೆ ಹೆಚ್ಚು ಆಹಾರ ಸೇವನೆ ಮಾಡ್ತಾರೆ. ಒಮ್ಮೆ ವ್ಯಾಯಾಮ ಮಾಡಿ ಕ್ಯಾಲೋರಿ ಬರ್ನ್ ಮಾಡಿ ಹೊಟ್ಟೆ ತುಂಬಾ ಆಹಾರ ಸೇವನೆ ಮಾಡಿ ಕುಳಿತಲ್ಲಿಯೇ ಕೆಲಸ ಮಾಡುವುದು ಕೂಡ ತೂಕ ಏರಲು ಕಾರಣ.
ವ್ಯಾಯಾಮ ಮಾಡಿದ್ರೆ ಮಾತ್ರ ಸಾಲದು ದಿನದಲ್ಲಿ ನೀವು ಎಷ್ಟು ಆ್ಯಕ್ಟೀವ್ ಆಗಿರುತ್ತೀರಾ? ಎಷ್ಟು ಓಡಾಡ್ತೀರಾ ಎಂಬುದು ಮಹತ್ವ ಪಡೆಯುತ್ತದೆ. ಹಾಗೆ ನೀವು ಸೇವಿಸುವ ಆಹಾರದಲ್ಲಿ ಹೆಚ್ಚು ಕ್ಯಾಲೋರಿ ಇದ್ದಲ್ಲಿ ಅದು ಕೂಡ ನಿಮ್ಮ ತೂಕ ಹೆಚ್ಚಿಸುತ್ತದೆ.