ಅಸಮರ್ಪಕ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜು ಪ್ರಸ್ತುತ ಗಂಭೀರ ಸಮಸ್ಯೆಯಾಗುತ್ತಿದೆ. ಬಿಡುವಿಲ್ಲದ ಕೆಲಸದಿಂದಾಗಿ ಜನರಿಗೆ ವ್ಯಾಯಾಮ ಮಾಡಲು ಸಮಯವಿಲ್ಲ. ಇದರಿಂದಾಗಿ ಬಯಸಿದರೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ಸಹ ಈ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ವ್ಯಾಯಾಮ ಇಲ್ಲದೆಯೇ ತೂಕ ಕಡಿಮೆ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.
5 ಬಿಳಿ ಆಹಾರಗಳ ಸೇವನೆಯನ್ನು ತ್ಯಜಿಸಿದ್ರೆ ಸುಲಭವಾಗಿ ತೂಕ ಕಡಿಮೆ ಮಾಡಬಹುದು. ತೂಕವನ್ನು ಕಳೆದುಕೊಳ್ಳಲು ನೀವು ಮೊದಲು ಮಾಡಬೇಕಾಗಿರುವುದು ಆಹಾರವನ್ನು ಬದಲಾಯಿಸುವುದು. ನಿಮ್ಮ ಡಯಟ್‌ನಿಂದ 5 ಬಿಳಿ ವಸ್ತುಗಳನ್ನು ತೆಗೆದುಹಾಕುವುದು. ತೂಕ ಕಡಿಮೆ ಮಾಡಿಕೊಳ್ಳಲು ಅಕ್ಕಿ, ಮೈದಾ, ಸಕ್ಕರೆ, ಹಾಲು ಮತ್ತು ಉಪ್ಪನ್ನು ದೂರವಿಡಿ ಎಂದು ತಜ್ಞರೇ ಸಲಹೆ ನೀಡಿದ್ದಾರೆ. ಇದನ್ನು ಪ್ರಯತ್ನಿಸಿದ್ರೆ ಒಂದೇ ವಾರದಲ್ಲಿ ತೂಕ ನಷ್ಟ ಪ್ರಾರಂಭವಾಗುತ್ತದೆ.
ತೂಕ ಇಳಿಸಿಕೊಳ್ಳಲು ಬಿಳಿ ಅಕ್ಕಿ, ಮೈದಾದಿಂದ ಮಾಡಿದ ತಿನಿಸುಗಳು, ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಉಪ್ಪನ್ನು ತಿನ್ನುವುದನ್ನು ನಿಲ್ಲಿಸಬೇಕು. ವಿಶೇಷವಾಗಿ ರಾತ್ರಿಯಲ್ಲಿ ಈ ವಸ್ತುಗಳನ್ನು ತಿನ್ನಬಾರದು. ಹೀಗೆ ಮಾಡುವುದರಿಂದ ತೂಕವು ಸುಲಭವಾಗಿ ಕಡಿಮೆಯಾಗುತ್ತದೆ.
ತೂಕ ಇಳಿಸಿಕೊಳ್ಳಲು ಬಯಸಿದರೆ ಮಲಗುವ ನಾಲ್ಕು ಗಂಟೆಗಳ ಮೊದಲು ಆಹಾರವನ್ನು ಸೇವಿಸಬೇಕು. ತಿಂದ ತಕ್ಷಣ ನಿದ್ರಿಸುವುದು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ರಾತ್ರಿ ತಡವಾಗಿ ಊಟ ಮಾಡುವ ಬದಲು ಸಂಜೆ 7 ರಿಂದ 8 ಗಂಟೆಯ ಒಳಗೆ ಊಟ ಮುಗಿಸಿಬಿಡಿ. ಇದರಿಂದ ತೂಕವು ಶೀಘ್ರವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.