ದೇಹತೂಕ ಇಳಿಸಬೇಕೆಂದು ವ್ಯಾಯಾಮ ಮಾಡಿ ಮಾಡಿ ರೋಸಿ ಹೋಗಿದ್ದೀರಾ, ಇಷ್ಟು ಮಾಡಿದರೂ ನಿಮಗೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ.
ಸೂಪರ್ ಹೀರೋ: ದೆಹಲಿಯ ‘ಮಟ್ಕಾ ಮ್ಯಾನ್’ಗೆ ಉದ್ಯಮಿ ಆನಂದ್ ಮಹೀಂದ್ರ ಶ್ಲಾಘನೆ
ಕೇವಲ ನೀರು ಕುಡಿಯುವ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರ ಹಾಕಬಹುದು. ಚೆನ್ನಾಗಿ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಿ ದೇಹ ಚಟುವಟಿಕೆಯಿಂದ ಇರುತ್ತದೆ.
ಮುಖದ ಲವಲವಿಕೆ ಹೆಚ್ಚಾಗುತ್ತದೆ. ಇದರಿಂದ ಬೊಜ್ಜು ಬರುವುದಿಲ್ಲ. ಮಲಗುವಾಗ ಒಂದು ಲೀಟರ್ ನೀರು ತುಂಬಿ ಇಟ್ಟುಕೊಂಡು ಮಲಗಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಪೂರ್ತಿ ಕುಡಿಯಿರಿ. ವ್ಯಾಯಾಮ ಮಾಡಲು ಆಗದೆ ಇರುವವರು ಹೀಗೆ ನೀರು ಕುಡಿದು ಬೊಜ್ಜನ್ನು ಕರಗಿಸಬಹುದು.
ಪ್ರತಿ ಒಂದು ಗಂಟೆಗೆ ಒಂದು ಲೋಟ ನೀರು ಕುಡಿಯಬೇಕು. ಸಣ್ಣಗಾಗಲು ಬಯಸುವವರು ಊಟಕ್ಕೂ ಮುಂಚೆ ಎರಡು ಲೋಟ ನೀರು ಕುಡಿಯಬೇಕು. ಆಗ ಊಟದ ಪ್ರಮಾಣ ಕಡಿಮೆಯಾಗುತ್ತದೆ. ಕ್ಯಾಲೋರಿಯೂ ಕಡಿಮೆ ಆಗುತ್ತದೆ. ಇದರಿಂದ ತೂಕವೂ ಕಡಿಮೆ ಆಗುತ್ತದೆ. ಊಟದ ಬಳಿಕ 20 ನಿಮಿಷ ಆದಮೇಲೆ ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ. ಇದರಿಂದ ದೇಹದ ಕೊಬ್ಬು ಕರಗುತ್ತದೆ.