ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಈಗ ಹುಡುಗಿಯರು ಕೂಡ ವ್ಯಾಯಾಮ, ಯೋಗ, ಜಿಮ್ ಮಾಡ್ತಾರೆ. ಈ ವೇಳೆ ಧರಿಸುವ ಉಡುಪು ಮಹತ್ವ ಪಡೆಯುತ್ತದೆ. ಸಾಮಾನ್ಯವಾಗಿ ದೈಹಿಕ ಚಟುವಟಿಕೆ ವೇಳೆ ಸ್ಪೋರ್ಟ್ಸ್ ಬ್ರಾವನ್ನು ಹುಡುಗಿಯರು ಧರಿಸುತ್ತಾರೆ. ಸ್ಪೋರ್ಟ್ಸ್ ಬ್ರಾ ಧರಿಸುವುದ್ರಿಂದ ಸಾಕಷ್ಟು ಪ್ರಯೋಜನಗಳಿವೆ.
ಸ್ಪೋರ್ಟ್ಸ್ ಬ್ರಾವನ್ನು ದೈಹಿಕ ಚಟುವಟಿಕೆಯಲ್ಲಿ ಮಾತ್ರವಲ್ಲ ಎಲ್ಲ ಸಮಯದಲ್ಲೂ ಧರಿಸಬಹುದು. ಇದು ಸ್ತನದ ಸ್ನಾಯುಗಳನ್ನು ರಕ್ಷಿಸುತ್ತದೆ. ಬೆಳೆಯುತ್ತಿರುವ ಸ್ತನದ ನೋವುಗಳನ್ನು ಕಡಿಮೆ ಮಾಡುತ್ತದೆ.
ನೀವು ಜಿಮ್ ಗೆ ಹೋಗ್ತಿದ್ದರೆ ಅಥವಾ ಸ್ಟ್ರಚ್ಚಿಂಗ್ ವ್ಯಾಯಾಮ ಮಾಡ್ತಿದ್ದರೆ ಸ್ಪೋರ್ಟ್ಸ್ ಬ್ರಾ ಧರಿಸುವುದು ಒಳ್ಳೆಯದು. ಸ್ಟ್ರಚ್ಚಿಂಗ್ ವ್ಯಾಯಾಮದ ವೇಳೆ ಸ್ತನದಲ್ಲಿ ಚಲನೆ ಇರುವುದ್ರಿಂದ ನೋವಾಗುತ್ತದೆ. ಸ್ಪೋರ್ಟ್ಸ್ ಬ್ರಾ ಧರಿಸಿದ್ರೆ ನೋವಿರುವುದಿಲ್ಲ. ಭುಜದ ನೋವುಗಳನ್ನು ಇದು ಕಡಿಮೆ ಮಾಡುತ್ತದೆ.
ವ್ಯಾಯಾಮ ಮಾಡುವಾಗ ಮಾತ್ರವಲ್ಲ ಕೆಲವರಿಗೆ ಸ್ತನದ ನೋವು ಆಗಾಗ ಕಾಡುತ್ತದೆ. ಸ್ವಲ್ಪ ಜೋರಾಗಿ ನಡೆದ್ರೂ ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಂತವರು ಸ್ಪೋರ್ಟ್ಸ್ ಬ್ರಾ ಧರಿಸುವುದು ಉತ್ತಮ.
ಯಾವುದೇ ದೈಹಿಕ ಚಟುವಟಿಕೆಯ ಸಮಯದಲ್ಲಿ ಸ್ಪೋರ್ಟ್ಸ್ ಬ್ರಾ ಸ್ತನಕ್ಕೆ ಉತ್ತಮ ಬೆಂಬಲವನ್ನು ನೀಡುತ್ತದೆ. ದೈಹಿಕ ಚಟುವಟಿಕೆ ವೇಳೆ ಸಾಮಾನ್ಯ ಬ್ರಾ ಧರಿಸಿದ್ರೆ ಸ್ತನ ಕುಗ್ಗುವ ಸಾಧ್ಯತೆಯಿರುತ್ತದೆ. ಸ್ಪೋರ್ಟ್ಸ್ ಬ್ರಾ ಕುಗ್ಗುವಿಕೆಯನ್ನು ಕಡಿಮೆ ಮಾಡುತ್ತದೆ.
ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಮಹಿಳೆಯರು ಸ್ಪೋರ್ಟ್ಸ್ ಬ್ರಾಗೆ ಹೆಚ್ಚಿನ ಆದ್ಯತೆ ನೀಡ್ತಾರೆ. ಇದಕ್ಕೆ ಪಟ್ಟಿಗಳಿರುವುದಿಲ್ಲ. ತೆಗೆಯುವುದು ಸುಲಭ. ಚರ್ಮದ ಮೇಲೆ ಪಟ್ಟಿಯ ಕಲೆ ಬೀಳುವುದಿಲ್ಲ. ತುರಿಕೆ ಸೇರಿದಂತೆ ಯಾವುದೇ ಸಮಸ್ಯೆ ಕಾಡುವುದಿಲ್ಲ.
ಸ್ತನದ ಗಾಯ ಅಥವಾ ಸ್ತನದ ಶಸ್ತ್ರಚಿಕಿತ್ಸೆಗೊಳಗಾದವರು ಸ್ಪೋರ್ಟ್ಸ್ ಬ್ರಾ ಧರಿಸುವುದು ಒಳ್ಳೆಯದು.