ಪ್ರತಿ ವರ್ಷದಂತೆ ಈ ವರ್ಷವೂ ದೇಶದೆಲ್ಲೆಡೆ ದೀಪಾವಳಿ ಪೂಜೆಗೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಂದರ್ಭದಲ್ಲಿ ಮನೆ ತುಂಬ ದೀಪ ಬೆಳಗಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಕುಟುಂಬಸ್ಥರಿಗೆ ಮನೆ ಪೂಜೆ ವಿಶೇಷವಾದ್ರೆ ವ್ಯಾಪಾರಸ್ಥರಿಗೆ ಅವ್ರ ವ್ಯಾಪಾರಿ ಸ್ಥಳದ ಪೂಜೆ ವಿಶೇಷವಾಗಿರುತ್ತದೆ.
ದೀಪಾವಳಿ ಸಂದರ್ಭದಲ್ಲಿ ಕಚೇರಿ ಪೂಜೆ ವೇಳೆ ಕೆಲವೊಂದು ಅಂಶಗಳನ್ನು ಪಾಲಿಸಬೇಕಾಗುತ್ತದೆ. ನಿಯಮದಂತೆ ಪೂಜೆ ಮಾಡಿದ್ರೆ ಲಕ್ಷ್ಮಿ ನಿಮಗೆ ಒಲಿಯಲಿದ್ದಾಳೆ. ಅದೃಷ್ಟ ಬದಲಾಗುತ್ತದೆ. ಧನ-ಸಂಪತ್ತು ಹರಿದು ಬರುತ್ತದೆ.
ಮುಂದಿನ 40 ವರ್ಷದಲ್ಲಿ ನನ್ನ ಸ್ಥಾನದಲ್ಲಿ ಮಹಿಳೆ ನೇಮಕಗೊಳ್ಳುತ್ತಾರೆ: ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಭವಿಷ್ಯ
ಅಂಗಡಿಯಾಗ್ಲಿ, ಕಂಪನಿಯಾಗಿರಲಿ ಎಲ್ಲೆಡೆ ಹಣವನ್ನು ಇಟ್ಟುಕೊಳ್ಳುವ ಲಾಕರ್ ಇದ್ದೇ ಇರುತ್ತದೆ. ಅದನ್ನು ಈ ದಿನ ಪೂಜಿಸಲಾಗುತ್ತದೆ. ಲಾಕರ್ ಪೂಜೆ ಮಾಡುವ ಮೊದಲು ಪೂಜಾ ಸಾಮಗ್ರಿಗಳನ್ನು ತಟ್ಟೆಯಲ್ಲಿ ಇಡಬೇಕು. ಮೊದಲನೆಯದಾಗಿ ಗಣೇಶನ ಆರತಿಯೊಂದಿಗೆ ಲಾಕರ್ ಪೂಜೆ ಪ್ರಾರಂಭಿಸಬೇಕು. ಇದರ ನಂತರ ತಾಯಿ ಲಕ್ಷ್ಮಿಗೆ ಆರತಿ ಬೆಳಗುವ ಮೂಲಕ ಲಾಕರ್ ಪೂಜೆ ಮಾಡಬೇಕು. ಕೊನೆಯಲ್ಲಿ ಲಾಕರ್ ಗೆ ಕುಂಕುಮವನ್ನಿಟ್ಟು ಅಕ್ಷತೆಯನ್ನು ಹಾಕುವ ಮೂಲಕ ಲಾಕರ್ ಪೂಜೆಯನ್ನು ಮುಗಿಸಿ. ಹೀಗೆ ಮಾಡಿದ್ರೆ ಲಾಕರ್ ನಲ್ಲಿ ಹಣ ಸದಾ ಇರುತ್ತದೆ. ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ.