ವ್ಯಾಪಾರದಲ್ಲಿ ಯಶಸ್ಸು ಸಿಗಲಿ ಎಂದು ಎಲ್ಲ ವ್ಯಾಪಾರಿಗಳೂ ಬಯಸ್ತಾರೆ. ಹಾಗಾಗಿಯೇ ವ್ಯಾಪಾರ ಮಾಡುವ ಮುನ್ನ ಪೂಜೆ, ಪುನಸ್ಕಾರ ಮಾಡ್ತಾರೆ. ಆದ್ರೆ ಪೂಜೆ ಜೊತೆ ವಾಸ್ತುವಿನ ಬಗ್ಗೆಯೂ ಗಮನ ನೀಡಬೇಕು. ಕಚೇರಿ ನಿರ್ಮಾಣ ಮಾಡಬೇಕಾದಲ್ಲಿ ಅಥವಾ ಕಚೇರಿಗಾಗಿ ಕಟ್ಟಡ ಖರೀದಿ ಮಾಡುವಾಗ ವಾಸ್ತುವಿನ ಬಗ್ಗೆ ಮಹತ್ವ ನೀಡಬೇಕು.
ಕಚೇರಿಯ ಪೂರ್ವ ಭಾಗಕ್ಕೆ ಬಾವಿ ಅಥವಾ ನೀರಿನ ಮೂಲವಿರಲಿ.
ಗಾರ್ಡನ್ ಮತ್ತು ಪಾರ್ಕಿಂಗ್ ಗಾಗಿ ಈಶಾನ್ಯ ಜಾಗವನ್ನು ಮೀಸಲಿಡಿ.
ನಿಮ್ಮ ಕಚೇರಿ ಮುಂದೆ ಯಾವುದೇ ಕಂಬ ಅಥವಾ ದೊಡ್ಡ ಮರ ಇರದಂತೆ ನೋಡಿಕೊಳ್ಳಿ.
ಕಚೇರಿಯ ಮುಖ್ಯ ಬಾಗಿಲು ಎಂದೂ ಉತ್ತರಕ್ಕಿರಲಿ. ಇದು ಶುಭ ಎಂದು ಪರಿಗಣಿಸಲಾಗಿದೆ.
ಕಚೇರಿ ನಿರ್ಮಾಣದ ಭೂಮಿ ಆಯತಾಕಾರದಲ್ಲಿರುವಂತೆ ನೋಡಿಕೊಳ್ಳಿ. ಇದು ವ್ಯಾಪಾರಸ್ಥರಿಗೆ ಉತ್ತಮ ಲಾಭ ತಂದುಕೊಡಲಿದೆ.