ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳ ಜೊತೆ ವೀಕೆಂಡ್ ಕರ್ಫ್ಯೂವನ್ನ ಜಾರಿಗೆ ತಂದಿದೆ. ಆದ್ರೆ ಸರ್ಕಾರದ ನಿರ್ಧಾರಕ್ಕೆ ಬೆಂಗಳೂರಿನ ಓಲಾ ಊಬರ್ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳಿಂದ ಸರಿಯಾದ ದುಡಿಮೆ ಇಲ್ಲದೆ ಪರದಾಡುತ್ತಿದ್ದೇವೆ. ಈಗ ವೀಕೆಂಡ್ ಕರ್ಫ್ಯೂ ಮಾಡಿದ್ರೆ ನಮ್ಮ ಜೀವನ ನಡೆಯೋದೆ ಕಷ್ಟವಾಗತ್ತೆ ಎಂದಿದ್ದಾರೆ.
ನಮಗೆ ವೀಕೆಂಡ್ ನಲ್ಲಿ, ಶನಿವಾರ ಮತ್ತು ಭಾನುವಾರ ಈ ಎರಡು ದಿನಗಳಲ್ಲೆ ಒಳ್ಳೆ ಆದಾಯ ಇರೋದು. ಆದ್ರೆ ಕರ್ಪ್ಯೂ ಜಾರಿ ಮಾಡಿರುವ ಸರ್ಕಾರ ಚಾಲಕರ ಜೀವನದ ಜೊತೆ ಚೆಲ್ಲಾಟವಾಡ್ತಿದೆ. ಕೊರೋನಾ ಹೆಚ್ಚಾಗುತ್ತಿದೆ, ಒಪ್ಪಿಕೊಳ್ಳುತ್ತೇವೆ ಆದರೆ ಇದನ್ನ ನಿಯಂತ್ರಿಸಲು ನಮ್ಮ ಹೊಟ್ಟೆ ಮೇಲೆ ಒಡೆಯುವುದು ದುಃಖಕರ ಸಂಗತಿ.
ಲಾಕ್ ಡೌನ್ ಬಿಟ್ಟು ಬೇರೆ ಪರಿಹಾರ ಇಲ್ಲವಾ, ಹಾಗಾದ್ರೆ ನಾವು ವ್ಯಾಕ್ಸಿನ್ ಪಡೆದಿರೋದು ಯಾವ ಪ್ರಯೋಜನಕ್ಕಾಗಿ. ಹೀಗೆ ಮುಂದುವರೆದರೆ ದುಡಿಮೆ ಇಲ್ಲದೆ, ಆದಾಯವಿಲ್ಲದೆ ಆಟೋ-ಚಾಲಕರ ಜೀವನ ನಶಿಸಿ ಹೋಗತ್ತೆ. ಕರ್ಫ್ಯೂ ಜಾರಿಯಾದ್ರೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗತ್ತೆ ಎಂದು ಚಾಲಕರು ಅಸಮಾಧಾನ ಹೊರ ಹಾಕಿದ್ದಾರೆ. ಇತ್ತ ವೀಕೆಂಡ್ ಕರ್ಫ್ಯೂ ಬೇಡ, ಕರ್ಫ್ಯೂ ಜಾರಿಗೊಳಿಸಿ ಚಾಲಕರ ದುಡಿಮೆಗೆ ಕಲ್ಲು ಹಾಕಬೇಡಿ ಎಂದು ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
https://youtu.be/zRlip8U2DeA