alex Certify ವ್ಯಾಕ್ಸಿನ್‌ ಪಡೆಯದ ಮಕ್ಕಳನ್ನು ಕೋವಿಡ್-19 ನಿಂದ ರಕ್ಷಿಸುವುದು ಹೇಗೆ….? ಇಲ್ಲಿದೆ ಪೋಷಕರಿಗೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಕ್ಸಿನ್‌ ಪಡೆಯದ ಮಕ್ಕಳನ್ನು ಕೋವಿಡ್-19 ನಿಂದ ರಕ್ಷಿಸುವುದು ಹೇಗೆ….? ಇಲ್ಲಿದೆ ಪೋಷಕರಿಗೆ ಸಲಹೆ

ದೆಹಲಿ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗ್ತಿವೆ. ಕೋವಿಡ್‌ ನಾಲ್ಕನೇ ಅಲೆಯೂ ಬರಬಹುದು ಎಂಬ ಆತಂಕ ಎದುರಾಗಿದೆ. ಎಲ್ಲಾ ಕಡೆ ಶಾಲೆಗಳೇನೋ ಆರಂಭವಾಗಿವೆ, ಆದ್ರೆ ಚಿಕ್ಕ ಮಕ್ಕಳಿಗೆ ಲಸಿಕೆ ಕೂಡ ಸಿಕ್ಕಿಲ್ಲ. ಹಾಗಾಗಿ ಈ ಅಪಾಯಕಾರಿ ವೈರಸ್ ಸೋಂಕಿನಿಂದ ಲಸಿಕೆ ಪಡೆಯದ ಚಿಕ್ಕ ಮಕ್ಕಳನ್ನು ರಕ್ಷಿಸೋದು ಹೇಗೆ ಅನ್ನೋದನ್ನು ನೋಡೋಣ.

ಶಾಲೆಗಳು ಮತ್ತು ಕೋಚಿಂಗ್ ಸೆಂಟರ್‌ಗಳಲ್ಲಿ ದೈಹಿಕ ಕಲಿಕೆ ಪ್ರಾರಂಭವಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ನೂ ಲಸಿಕೆಯೇ ಬಂದಿಲ್ಲ. ಹಾಗಾಗಿ ಇವರಲ್ಲಿ ಸೋಂಕಿನ ಅಪಾಯ ಹೆಚ್ಚಾಗಿದೆ. ಈ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಉಳಿದವರಿಗಿಂತ ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ.

ಮಾಸ್ಕ್:‌ ನೀವು ಮಕ್ಕಳ ಶಿಕ್ಷಣ ಮತ್ತು ಅವರ ಇತರ ಹವ್ಯಾಸಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ಈಗ ವೈದ್ಯರ ಸಲಹೆ ಪಡೆದು ಮಕ್ಕಳಿಗೆ ಉತ್ತಮ ಗುಣಮಟ್ಟದ ಮಾಸ್ಕ್‌ಗಳನ್ನು ಖರೀದಿಸಿ ಕೊಡಿ. ಸೂಕ್ತವಾದ ಮಾಸ್ಕ್‌ ಧರಿಸುವುದರಿಂದ ಸೋಂಕನ್ನು ಬಹುಮಟ್ಟಿಗೆ ತಡೆಗಟ್ಟಬಹುದು.

ಆರೋಗ್ಯ ತಪಾಸಣೆ : ವೈರಸ್ ಸಂಪೂರ್ಣವಾಗಿ ನಾಶವಾಗುವುದು ಅಸಾಧ್ಯವೆನಿಸುತ್ತಿದೆ. ಹಾಗಾಗಿ ಪೋಷಕರು ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು ಸಂಪೂರ್ಣ ಹೆಲ್ತ್‌ ಚೆಕಪ್‌ ಮಾಡಿಸಿ. ಇದರಿಂದ ಮಕ್ಕಳ ನಿಜವಾದ ವೈದ್ಯಕೀಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.

ಉಳಿದ ವ್ಯಾಕ್ಸಿನ್‌ಗಳನ್ನು ಹಾಕಿಸಿ : ನಿಮ್ಮ ಮಕ್ಕಳು ಕೊರೊನಾ ವ್ಯಾಕ್ಸಿನ್‌ ಹೊರತುಪಡಿಸಿ ಉಳಿದ ಲಸಿಕೆಗಳನ್ನು ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಫ್ಲೂಗೆ ಸಂಬಂಧಿಸಿದ ಲಸಿಕೆ ಅತ್ಯಂತ ಮುಖ್ಯವಾಗಿದೆ, ಏಕೆಂದರೆ ಇದು ಓಮಿಕ್ರಾನ್ ವಿರುದ್ಧ ರಕ್ಷಿಸುತ್ತದೆ.

ಕೋವಿಡ್‌ ನಿಯಮ ತಿಳಿದಿರಲಿ : ಕೊರೊನಾ ತಡೆಗಟ್ಟಲು ಉತ್ತಮ ಮಾರ್ಗವೆಂದರೆ ನಿಯಮಗಳನ್ನು ಪಾಲಿಸುವುದು. ಈ ಬಗ್ಗೆ ಪೋಷಕರು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಕೆ ಬಗ್ಗೆ ಸರಿಯಾದ ಮಾಹಿತಿ ನೀಡಿ.

ಆರೋಗ್ಯಕರ ಡಯಟ್:‌ ಮಕ್ಕಳು ಆರೋಗ್ಯಕರ ಆಹಾರವನ್ನು ಸೇವಿಸಿದರೆ ಕೊರೊನಾ ವೈರಸ್‌ನಿಂದ ಪಾರಾಗುವುದು ಸುಲಭ. ಇಮ್ಯುನಿಟಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುವ ಆಹಾರಗಳನ್ನೇ ಮಕ್ಕಳಿಗೆ ಕೊಡಿ. ಹೊರಗಿನ ತಿನಿಸುಗಳು ಬೇಡ. ಮನೆಯಿಂದಲೇ ಟಿಫಿನ್ ಪ್ಯಾಕ್ ಮಾಡಿ. ಅವರ ಆಹಾರದಲ್ಲಿ ಸಾಕಷ್ಟು ವಿಟಮಿನ್ ಇ ಮತ್ತು ಕಬ್ಬಿಣದ ಅಂಶ ಇರುವುಂತೆ ನೋಡಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...