ಪ್ರತಿಯೊಬ್ಬ ವ್ಯಕ್ತಿ ತನ್ನ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಬಯಸ್ತಾನೆ. ಉದ್ಯೋಗ, ವ್ಯವಹಾರ ಎರಡರಲ್ಲೂ ಯಶಸ್ಸು ಗಳಿಸುವುದು ಸಲಭವಲ್ಲ. ಕೆಲವೊಮ್ಮೆ ಗ್ರಹಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಪ್ರತಿಯೊಂದು ರೀತಿಯ ವ್ಯವಹಾರವು ಕೆಲವು ಗ್ರಹಗಳಿಗೆ ಸಂಬಂಧಿಸಿದೆ. ವ್ಯಕ್ತಿಯ ಜಾತಕದಲ್ಲಿ ಆ ಗ್ರಹದ ಸ್ಥಾನವು ಪ್ರಬಲವಾಗಿದ್ದರೆ, ಅವನು ಉತ್ತಮ ಯಶಸ್ಸನ್ನು ಪಡೆಯುತ್ತಾನೆ.
ಬಟ್ಟೆ ವ್ಯಾಪಾರ ಮುಖ್ಯವಾಗಿ ಶುಕ್ರ ಗ್ರಹಕ್ಕೆ ಸಂಬಂಧಿಸಿದ ವ್ಯವಹಾರವಿದೆ. ಈ ವ್ಯವಹಾರದ ಯಶಸ್ಸಿಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಓಂ ಶುಮ್ ಶುಕ್ರೇ ನಮಃ ಎಂಬ ಮಂತ್ರವನ್ನು ಪಠಿಸಬೇಕು. ಕುತ್ತಿಗೆಗೆ ಬಿಳಿ ಸ್ಪಟಿಕ ಹಾರವನ್ನು ಧರಿಸುವುದರಿಂದ ಸಹ ಪ್ರಯೋಜನವಾಗುತ್ತದೆ. ಕಪ್ಪು ಬಣ್ಣವನ್ನು ಬಳಸಬಾರದು. ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಗೆ ಬಿಳಿ ಸಿಹಿತಿಂಡಿಗಳನ್ನು ಅರ್ಪಿಸಬೇಕು.
ಆಹಾರ -ಧಾನ್ಯಗಳ ವ್ಯವಹಾರವು ಗುರು ಗ್ರಹಕ್ಕೆ ಸಂಬಂಧಿಸಿದೆ. ಹೋಟೆಲ್, ರೆಸ್ಟೋರೆಂಟ್ ಮುಂತಾದ ಬೇಯಿಸಿದ ಆಹಾರದ ವ್ಯವಹಾರವು ಶುಕ್ರದೊಂದಿಗೆ ಸಂಬಂಧಿಸಿದೆ. ಧಾನ್ಯ ವ್ಯವಹಾರದಲ್ಲಿ ಅಭಿವೃದ್ಧಿ ಬಯಸುವವರು ಶ್ರೀಕೃಷ್ಣನನ್ನು ಪೂಜಿಸಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 108 ಬಾರಿ ಕೃಷ್ಣನ ಮಂತ್ರವನ್ನು ಪಠಿಸಿ. ಹಣೆಯ ಮೇಲೆ ಬಿಳಿ ಅಥವಾ ಹಳದಿ ಶ್ರೀಗಂಧವನ್ನು ಪ್ರತಿದಿನ ಹಚ್ಚಿ. ಹಳದಿ ಬಣ್ಣದ ರೇಷ್ಮೆ ಕರವಸ್ತ್ರವನ್ನು ಇಟ್ಟುಕೊಳ್ಳಿ.
ಭೂಮಿ, ನಿರ್ಮಾಣ ಅಥವಾ ಗುತ್ತಿಗೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಯಶಸ್ಸ ಪಡೆಯಲು ಮಂಗಳ ಗ್ರಹ ಶುಭವಾಗಿರಬೇಕು. ಗ್ರಹವು ದುರ್ಬಲ ಸ್ಥಿತಿಯಲ್ಲಿದ್ದಾಗ ವ್ಯವಹಾರದಲ್ಲಿ ಹಿನ್ನಡೆಯಾಗುತ್ತದೆ. ಯಶಸ್ಸಿಗೆ ಕಚೇರಿಯಲ್ಲಿ ಕೆಂಪು ಬಣ್ಣದ ಹನುಮಂತನ ಮೂರ್ತಿಯನ್ನು ಸ್ಥಾಪಿಸಿ ಪೂಜೆ ಮಾಡಬೇಕು. ಪ್ರತಿದಿನ ಬೆಳಿಗ್ಗೆ ದೀಪವನ್ನು ಬೆಳಗಿಸಬೇಕು. ಹನುಮಾನ್ ಚಾಲಿಸಾ ಪಠಿಸಬೇಕು.
ತರಬೇತಿ ಕೇಂದ್ರ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ವ್ಯವಹಾರವು ಬುಧ, ಗುರು ಮತ್ತು ಶುಕ್ರ ಗ್ರಹಗಳಿಗೆ ಸಂಬಂಧಿಸಿದೆ. ಶಿವನ ಆರಾಧನೆ ಮಾಡಬೇಕು. ಪ್ರತಿದಿನ ಬೆಳಿಗ್ಗೆ ಶಿವನಿಗೆ ಬಿಳಿ ಅಥವಾ ಹಳದಿ ಹೂಗಳನ್ನು ಅರ್ಪಿಸಬೇಕು. ಕೆಲಸದ ಸ್ಥಳದ ಬಣ್ಣ ತಿಳಿ ಹಳದಿ ಅಥವಾ ಬಿಳಿ ಬಣ್ಣದಲ್ಲಿರಬೇಕು.
ಕಬ್ಬಿಣ, ಪೆಟ್ರೋಲ್ ಅಥವಾ ಕಲ್ಲಿದ್ದಲಿನ ವ್ಯವಹಾರ ಶನಿ ಗ್ರಹಕ್ಕೆ ಸಂಬಂಧಿಸಿದ ವ್ಯವಹಾರವಾಗಿದೆ. ಬಲಗೈಯ ಮಧ್ಯದ ಬೆರಳಿಗೆ ಕಬ್ಬಿಣದ ಉಂಗುರವನ್ನು ಧರಿಸಿ. ಬಲಗೈ ಮಣಿಕಟ್ಟಿಗೆ ಕಪ್ಪು ರೇಷ್ಮೆ ದಾರವನ್ನು ಕಟ್ಟಿಕೊಳ್ಳಿ.
ಸೌಂದರ್ಯವರ್ಧಕಗಳ ವ್ಯವಹಾರ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಈ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಅಂಗಡಿ ಅಥವಾ ಕಚೇರಿಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸಿ. ಪ್ರತಿದಿನ ಬೆಳಿಗ್ಗೆ ಸುಗಂಧ ದ್ರವ್ಯವನ್ನು ಅರ್ಪಿಸಿ.