
ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಬಯಸ್ತಾನೆ. ಕೆಲವರು ಎಷ್ಟು ಕಷ್ಟ ಪಟ್ಟರೂ ಶ್ರೀಮಂತರಾಗುವುದಿಲ್ಲ. ಆದ್ರೆ ಕೆಲವರು ಸಣ್ಣ ಸಣ್ಣ ಟ್ರಿಕ್ಸ್ ಬಳಸಿ ಶ್ರೀಮಂತರಾಗ್ತಾರೆ. ನೀವೂ ಬೇಗ ಆರ್ಥಿಕವಾಗಿ ಸದೃಢವಾಗಲು ಬಯಸಿದ್ದರೆ ಕೆಲವೊಂದು ಉಪಾಯ ಅನುಸರಿಸಿ.
ಬೇರೆಯವರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದಿದ್ದರೆ ಐದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಏಳು ಬಾರಿ ತಲೆಗೆ ಸುಳಿದು ಛೇದವಿರುವ ಜಾಗಕ್ಕೆ ಎಸೆಯಿರಿ. ಬೆಳ್ಳುಳ್ಳಿ ಎಸೆದ ನಂತ್ರ ತಿರುಗಿ ನೋಡಬೇಡಿ.
ಮನೆಯಲ್ಲಿ ಸದಾ ಜಗಳವಾಗ್ತಿದ್ದರೆ ಶನಿವಾರ ಅಥವಾ ಮಂಗಳವಾರ ಸಾಸಿವೆ ಜೊತೆ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಲವಂಗವನ್ನು ಸುಡಬೇಕು. ಅದ್ರ ಹೊಗೆ ವಾತಾವರಣವನ್ನು ಶುದ್ಧಗೊಳಿಸುತ್ತದೆ.
ವ್ಯಾಪಾರದಲ್ಲಿ ತೊಂದರೆಯಾಗುತ್ತಿದ್ದರೆ ಅಂಗಡಿ ಅಥವಾ ಕಾರ್ಖಾನೆ ಮುಖ್ಯ ದ್ವಾರದಲ್ಲಿ ಕೆಂಪು ಬಟ್ಟೆಯಲ್ಲಿ ಐದು ಅಥವಾ ಏಳು ಬೆಳ್ಳುಳ್ಳಿ ಮೊಗ್ಗನ್ನು ಹಾಕಿ ಕಟ್ಟಿ. ವ್ಯಾಪಾರದಲ್ಲಿ ನಿರಂತರ ಲಾಭ ಕಾಣಬಹುದು.
ಆರ್ಥಿಕ ಸಂಕಷ್ಟ ಎದುರಿಸುವವರು ಪರ್ಸ್ ಅಥವಾ ಕಪಾಟಿನಲ್ಲಿ ಬೆಳ್ಳುಳ್ಳಿಯನ್ನು ಇಡಬೇಕು. ಬಟ್ಟೆಯೊಂದರಲ್ಲಿ ಕಟ್ಟಿ ಬೆಳ್ಳುಳ್ಳಿ ಮೊಗ್ಗನ್ನು ಇಟ್ಟರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ.
ಮಕ್ಕಳು ಕಿರಿಕಿರಿ ಮಾಡ್ತಿದ್ದರೆ, ಆರೋಗ್ಯ ಸಮಸ್ಯೆ ಎದುರಾಗಿದ್ದರೆ ಬೆಳ್ಳುಳ್ಳಿಯನ್ನು ಮಕ್ಕಳ ಇಡೀ ದೇಹಕ್ಕೆ ಸುಳಿದು ಅದನ್ನು ಮೆಣಸಿನ ಜೊತೆ ಸುಡಬೇಕು.