ಕೊಪ್ಪಳ- ಸದ್ಯ ರಾಜಕೀಯ ವಿಶ್ರಾಂತಿಯಲ್ಲಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿಯವರು ಮುಂದಿನ ರಾಜಕೀಯ ಭವಿಷ್ಯ ಏನು ಎಂಬ ಚರ್ಚೆಯಂತೂ ಶುರುವಾಗಿದೆ. ಈಗಾಗಲೇ ಅನೇಕ ಬಾರಿ ಬಿಜೆಪಿ ವಿರುದ್ಧ ಮಾತನಾಡಿದ್ದ ಜನಾರ್ಧನ ರೆಡ್ಡಿ, ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ ಅನ್ನೋ ಅನುಮಾನ ಶುರುವಾಗಿದೆ. ಈ ಬೆನ್ನಲ್ಲೇ ವೈಎಸ್ ಆರ್ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಜನಾರ್ಧನ ರೆಡ್ಡಿ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ.
ಹೌದು, ಬಿಜೆಪಿಗೆ ಮತ್ತೆ ಮರಳೋದಿಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡ್ತಾ ಇಲ್ಲವಂತೆ. ಹೀಗಾಗಿ ಅವರದ್ದೇ ಆದ ಮತ್ತೊಂದು ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಮರು ಪ್ರವೇಶ ಮಾಡ್ತಾರೆ ಅನ್ನೋ ಮಾತು ಕೇಳಿ ಬರ್ತಾ ಇದ್ವು. ಇದರ ಬೆನ್ನಲ್ಲೇ ಮತ್ತೊಂದು ವಿಚಾರ, ಜಗನ್ ಜೊತೆ ಕೈ ಜೋಡಿಸ್ತಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಹೈದರಾಬಾದ್ನಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಡಿಸೆಂಬರ್ 18 ರ ನಂತರ ಅವರ ರಾಜಕೀಯ ಸ್ಪರ್ಧೆ ಬಗ್ಗೆ ಸ್ಪಷ್ಟ ನಿಲುವು ಬಹಿರಂಗವಾಗಲಿದೆ ಎಂದಿದ್ದರು. ಇನ್ನು ಜಗನ್ ಮೋಹನ್ ತಂದೆ ಜೊತೆ ಹಿಂದಿನಿಂದಲೂ ರೆಡ್ಡಿಯವರು ಉತ್ತಮ ಬಾಂದವ್ಯ ಇಟ್ಟುಕೊಂಡಿದ್ದರು. ಹೀಗಾಗಿ ರಾಜಕೀಯವನ್ನೂ ಜಗನ್ ಜೊತೆ ಸೇರಿ ರಾಜಕೀಯ ಮರು ಪ್ರವೇಶ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ.