ಮದುವೆಗೆ ಎರಡು ಗ್ರಹ ಮಹತ್ವದ ಪಾತ್ರ ವಹಿಸುತ್ತವೆ. ಮಹಿಳೆಯರ ಜಾತಕದಲ್ಲಿ ಗುರು ಹಾಗೂ ಪುರುಷರಲ್ಲಿ ಶುಕ್ರ ಬಲವಾಗಿರಬೇಕು. ಶುಕ್ರ ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಜಾತಕದಲ್ಲಿ ಒಂದೊಂದು ಗ್ರಹ ಒಂದೊಂದು ಪ್ರಭಾವ ಬೀರುತ್ತದೆ.
ಮಂಗಳ ಗ್ರಹ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಮಂಗಳ ಕೆಟ್ಟ ಸ್ಥಾನದಲ್ಲಿದ್ದರೆ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿವಾಹ ಮುರಿದು ಬೀಳುವ ಜೊತೆಗೆ ವಿಚ್ಛೇದನಕ್ಕೂ ಕಾರಣವಾಗುತ್ತದೆ.
ರಾಹು ದಂಪತಿ ಮಧ್ಯೆ ಅನವಶ್ಯಕ ವಿವಾದಕ್ಕೆ ಕಾರಣವಾಗ್ತಾನೆ. ಶನಿ ದೀರ್ಘಕಾಲದ ನಂತ್ರ ಸಂಬಂಧ ಹಾಳು ಮಾಡುತ್ತಾನೆ. ಗುರು ಗ್ರಹ ದೋಷದಿಂದ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಶುಕ್ರ ಕೆಟ್ಟದಾಗಿದ್ದರೆ ಅತಿ ಬೇಗ ವಿವಾಹದಲ್ಲಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಪತಿ-ಪತ್ನಿ ಜಾತಕದಲ್ಲಿರುವ ಗ್ರಹಗಳ ಮಧ್ಯೆ ಸ್ನೇಹವಿಲ್ಲದೆ ಹೋದಲ್ಲಿ ಸಮಸ್ಯೆ ಕಾಡುತ್ತದೆ. ಪತಿ-ಪತ್ನಿ ಇಬ್ಬರಲ್ಲಿ ಒಬ್ಬರ ಮಂಗಳ ಗ್ರಹ ಗಟ್ಟಿಯಾಗಿದ್ದರೂ ಸಮಸ್ಯೆ ಕಾಡುತ್ತದೆ. ಒಬ್ಬರ ಜಾತಕದಲ್ಲಿ ಸೂರ್ಯ-ಶನಿ ಒಟ್ಟಿಗಿದ್ದರೆ ಬಿಕ್ಕಟ್ಟು ಕಾಣಿಸಿಕೊಳ್ಳುತ್ತದೆ.
ರಾತ್ರಿ ಕೊಳಕಾದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ. ಮನೆಯಲ್ಲಿ ಒಡೆದ ಗಾಜು ಅಥವಾ ಕನ್ನಡಿಯನ್ನು ಇಡಬಾರದು. ಪತಿ-ಪತ್ನಿ ಇಬ್ಬರು ವಾರದಲ್ಲಿ ಒಂದು ದಿನ ದೇವಸ್ಥಾನಕ್ಕೆ ಹೋಗಬೇಕು. ಮಲಗುವ ಕೋಣೆಯಲ್ಲಿ ಬಣ್ಣ ಬಣ್ಣದ ಹೂವಿನ ಚಿತ್ರವಿರಲಿ. ಬೆರಳುಗಳಿಗೆ ವಜ್ರವನ್ನು ಧರಿಸಬೇಡಿ.