ವೈರಲ್ ಜ್ವರದ ಲಕ್ಷಣಗಳನ್ನು ವೈದ್ಯರು ಕಂಡಾಕ್ಷಣ ಗುರುತಿಸುತ್ತಾರೆ. ಎರಡು ದಿನ ಬಿಡದೆ ಕಾಡುವ ಜ್ವರ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಯಾವ ಮದ್ದಿಗೂ ಬಗ್ಗದ ಜ್ವರ, ಕೆಮ್ಮು ಹಾಗೂ ಶೀತದ ಲಕ್ಷಣಗಳು ಬಳಿಕ ನಿಧಾನಕ್ಕೆ ಕಡಿಮೆಯಾಗುತ್ತದೆ.
ಇವು ಉಸಿರಾಡುವ ಗಾಳಿಯ ಮೂಲಕ, ತಿನ್ನುವ ಆಹಾರದ ಮೂಲಕ ಇನ್ನೊಬ್ಬರಿಂದ ಹರಡುತ್ತದೆ. ಇದನ್ನು ಬರದಂತೆ ತಡೆಯಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೊಂದೇ ಪರಿಹಾರ.
ಧನಿಯಾ ಅಥವಾ ಕೊತ್ತಂಬರಿ ಬೀಜದ ಬಿಸಿಯಾದ ಕಷಾಯ ತಯಾರಿಸಿ ಕುಡಿಯಿರಿ. ಇದರಿಂದ ಜ್ವರದ ಲಕ್ಷಣಗಳು ಕಡಿಮೆಯಾಗುತ್ತವೆ.
ಶುಂಠಿ ಜೇನುತುಪ್ಪ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಗುಣ ಹೊಂದಿದ್ದು ನಮ್ಮ ದೇಹದಿಂದ ಅನಗತ್ಯ, ವಿಷಕಾರಿ ಅಂಶಗಳನ್ನು ಹೊರ ಹಾಕುತ್ತವೆ. ಕೆಟ್ಟ ಬ್ಯಾಕ್ಟೀರಿಯಾಗಳನ್ನು ದೂರವಿಡುವ ಈ ಎರಡು ವಸ್ತುಗಳನ್ನು ಕಷಾಯ ರೂಪದಲ್ಲಿ ಅಥವಾ ನೇರವಾಗಿ ಸೇವಿಸಿ.
ದಾಲ್ಚಿನಿ ವೈರಲ್ ಜ್ವರಕ್ಕೆ ಅತ್ಯುತ್ತಮ ಮದ್ದು. ಇದಕ್ಕೆ ಎರಡು ಮೊಗ್ಗು ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಿ ಸೋಸಿ ಕುಡಿಯಿರಿ.
ವೈರಲ್ ಜ್ವರವನ್ನು ದೂರ ಮಾಡುವ ಇನ್ನೊಂದು ಗಿಡ ತುಳಸಿ. ಇದರ ಎಲೆಗಳನ್ನು ಸ್ವಚ್ಛವಾಗಿ ತೊಳೆದು ನೀರಿನಲ್ಲಿ ಕುದಿಸಿ ಸೋಸಿ. ಲವಂಗದ ಪುಡಿ ಉದುರಿಸಿ. ಉಗುರು ಬೆಚ್ಚಗಾದ ಬಳಿಕ ಕುಡಿಯಿರಿ.