ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಸಕ್ರಿಯರಾಗಿದ್ದಾರೆ. ಆಗಾಗ ಕೆಲವೊಂದು ಫನ್ನಿ ಹಾಗೂ ವಿಶೇಷವಾಗಿರೋ ವಿಡಿಯೋಗಳನ್ನು ಹಂಚಿಕೊಳ್ತಾರೆ. ಇದೀಗ ಅಂಥದ್ದೇ ದೇಸಿ ಜುಗಾಡ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಚಿಕ್ಕ ಮಗುವೊಂದು ಮೀನು ಹಿಡಿಯಲು ಮಾಡಿರುವ ಪ್ಲಾನ್ ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ.
ಮರದ ಪುಟ್ಟ ಯಂತ್ರಕ್ಕೆ ದಾರ ಅಳವಡಿಸಿದ ಮಗು ತುದಿಯಲ್ಲಿ ಆಹಾರದ ಬುತ್ತಿಯನ್ನು ಚುಚ್ಚಿ ನೀರಿಗೆ ಎಸೆಯುತ್ತಾನೆ. ಕೆಲವೇ ಕ್ಷಣಗಳಲ್ಲಿ ಅದನ್ನು ತಿನ್ನಲು ಬಂದ ಎರಡು ಬೃಹತ್ ಗಾತ್ರದ ಮೀನುಗಳು ಸಿಕ್ಕಿ ಬೀಳುತ್ತವೆ. ಅದನ್ನು ದಡಕ್ಕೆ ಎಳೆದ ಮಗು, ಬ್ಯಾಗ್ ನಲ್ಲಿ ತುಂಬಿಸಿಕೊಳ್ಳುವ ವಿಡಿಯೋ ಈಗ ವೈರಲ್ ಆಗಿದೆ.
ಈ ವಿಡಿಯೋವನ್ನು ಜಾಲತಾಣದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 83 ಸಾವಿರಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ. ಕಮೆಂಟ್ ಗಳು ಕೂಡ ಸಾಕಷ್ಟು ಬಂದಿವೆ. ಅಷ್ಟು ಪುಟ್ಟ ಬಾಲಕ ಮೀನು ಹಿಡಿಯಲು ಮಾಡಿರುವ ಮಾಸ್ಟರ್ ಪ್ಲಾನ್ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದೆ.