ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ನಟಿ ಮಹಾಲಕ್ಷ್ಮಿ ಮದುವೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಷ್ಟು ಸುಂದರವಾಗಿರೋ ಮಹಾಲಕ್ಷ್ಮಿ ಹಣಕ್ಕಾಗಿಯೇ ರವೀಂದ್ರರನ್ನು ಮದುವೆಯಾಗಿದ್ದಾಳೆ ಅನ್ನೋ ಕಮೆಂಟ್‌ಗಳು ಕೇಳಿ ಬಂದಿದ್ದವು. ಆದರೆ ಇದಕ್ಕೆಲ್ಲ ದಂಪತಿ ಸೊಪ್ಪು ಹಾಕಿಲ್ಲ. ಇವರಿಬ್ಬರ ನಡುವೆ ಇರುವ ಪ್ರೀತಿ ನೋಡಿ ಅಭಿಮಾನಿಗಳೇ ಈಗ ಖುಷಿಯಾಗಿದ್ದಾರೆ.
ಮದುವೆಯ ನಂತರ ಮಹಾಲಕ್ಷ್ಮಿ ಹಾಗೂ ರವೀಂದ್ರ ಮೊದಲ ದೀಪಾವಳಿಯನ್ನು ಆಚರಿಸಿದರು. ದೀಪಾವಳಿಗೂ ಮುನ್ನ ರವೀಂದ್ರ ಮಹಾಲಕ್ಷ್ಮಿಗೆ ಕಾರ್ ಒಂದನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದರು. ಮಹಾಲಕ್ಷ್ಮಿ ಕಾರಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇಬ್ಬರೂ ಕಾರಿನಲ್ಲಿ ಕುಳಿತಿರುವ ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ.
“ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದು ಮುಖ್ಯವಲ್ಲ, ನಿಮ್ಮ ಪಕ್ಕದಲ್ಲಿ ಯಾರಿದ್ದಾರೆ ಎಂಬುದು ಮುಖ್ಯ,” ಎಂಬ ಸಾಲುಗಳನ್ನು ಬರೆದಿದ್ದಾರೆ. ಚಿತ್ರದಲ್ಲಿ ಮಹಾಲಕ್ಷ್ಮಿ ರವೀಂದ್ರ ಚಂದ್ರಶೇಖರ್ ಹೆಗಲ ಮೇಲೆ ತಲೆಯಿಟ್ಟು ಕುಳಿತಿದ್ದಾರೆ. ಹಿನ್ನೆಲೆಯಲ್ಲಿ ಎನೈ ನೋಕಿ ಪಾಯುಮ್ ತೋಟಾ ಚಿತ್ರದ ರೊಮ್ಯಾಂಟಿಕ್ ಹಾಡು ಕೇಳಿಸುತ್ತಿತ್ತು.
ಪೋಸ್ಟ್‌ನಲ್ಲಿ ರವೀಂದ್ರ ಕೂಡ ಪತ್ನಿ ಬಗ್ಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈಗ ನೀವು ಎಷ್ಟು ಖುಷಿಯಾಗಿದ್ದೀರಿ ಎಂಬುದು ಮುಖ್ಯವಲ್ಲ.. ನಿಮ್ಮ ಪಕ್ಕದಲ್ಲಿರುವವರನ್ನು ಎಷ್ಟು ಸಂತೋಷಪಡಿಸುತ್ತೀರಿ ಎಂಬುದು ಬಹಳ ಮುಖ್ಯ.. ನನ್ನ ಮಹಾಲಕ್ಷ್ಮಿ ಸಂತೋಷದಿಂದಿದ್ದಾಳೆ ಅಂತಾ ಆತ ಬರೆದುಕೊಂಡಿದ್ದಾರೆ. ಮಹಾಲಕ್ಷ್ಮಿ ತನ್ನ ಗಂಡನ ಕಾಮೆಂಟ್‌ಗೆ ಹಾರ್ಟ್, ಕಿಸ್ ಎಮೋಟಿಕಾನ್‌ಗಳೊಂದಿಗೆ ಉತ್ತರಿಸಿದ್ದಾಳೆ.
ಇವರ ನಡುವಿನ ಪ್ರೇಮವನ್ನು ನೋಡಿ ಇಬ್ಬರ ಅಭಿಮಾನಿಗಳೂ ಖುಷಿಪಟ್ಟಿದ್ದಾರೆ. ಯಾವಾಗಲೂ ಸಂತೋಷವಾಗಿರಿ. ನನ್ನ ನೆಚ್ಚಿನ ಜೋಡಿಗಳು ನೀವು, ನಿಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತಿರುವುದನ್ನು ನೋಡಲು ಖುಷಿಯಾಗ್ತಿದೆ ಎಂದೆಲ್ಲ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಇತ್ತೀಚೆಗಷ್ಟೇ ಟ್ರೋಲರ್‌ಗಳಿಗೆ ಫುಲ್ ಸ್ಟಾಪ್ ಹಾಕಲು ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಗೆ ಬಂದಿತ್ತು. ತಮ್ಮನ್ನು ಅಪಹಾಸ್ಯ ಮಾಡಬೇಡಿ ಎಂದು ಮನವಿ ಮಾಡಿದ್ದರು. ರವೀಂದ್ರ ಮಾತ್ರವಲ್ಲ, ಯಾರನ್ನೂ ಅವಮಾನಿಸಬಾರದು ಎಂದು ಮಹಾಲಕ್ಷ್ಮಿ ಕೇಳಿಕೊಂಡಿದ್ದರು.
https://www.instagram.com/p/CkXrmR2yKUh/?utm_source=ig_embed&ig_rid=6a569639-7867-45e5-bff9-6141f209cce0