
ಮಾನವೀಯತೆ ಇನ್ನೂ ಸಂಪೂರ್ಣ ಸತ್ತಿಲ್ಲ ಅನ್ನೋದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ವ್ಯಕ್ತಿಯೊಬ್ಬ ಬೆದರಿ ಮಲಗಿದ್ದ ಜಿಂಕೆ ಮರಿಯನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಕಾಡಲ್ಲಿ ಅಲೆಯುತ್ತ ಅಲೆಯುತ್ತ ಪುಟ್ಟ ಜಿಂಕೆ ಮರಿ ರಸ್ತೆಗೆ ಬಂದುಬಿಟ್ಟಿತ್ತು.
ಶರವೇಗದಲ್ಲಿ ಓಡಾಡುವ ವಾಹನಗಳನ್ನು ಮೊದಲ ಬಾರಿ ನೋಡಿದ್ದ ಜಿಂಕೆ ಮರಿ ಬೆದರಿ ಬಿಟ್ಟಿತ್ತು. ಯಾವ ಕಡೆ ಹೋಗಬೇಕು ಅನ್ನೋದು ಗೊತ್ತಾಗದೇ ಅಲ್ಲಾಡದೆ ರಸ್ತೆಯಲ್ಲೇ ಮಲಗಿಬಿಟ್ಟಿದೆ. ಇದನ್ನು ವಾಹನ ಸವಾರನೊಬ್ಬ ಗಮನಿಸಿದ್ದಾನೆ.
ಕೂಡಲೇ ಕಾರಿನಿಂದ ಕೆಳಕ್ಕಿಳಿದ ಆತ ಕಾರ್ಡ್ ಬೋರ್ಡ್ ಸಹಾಯದಿಂದ ಜಿಂಕೆ ಮರಿಯನ್ನು ರಸ್ತೆಯಿಂದ ಬದಿಗೆ ಸರಿಸಿದ್ದಾನೆ. ಬಳಿಕ ಮೇಲೆದ್ದ ಜಿಂಕೆ ಮರಿ ಅಲ್ಲಿಂದ ಓಡಿ, ಕಾಡಿನಲ್ಲಿ ಮರೆಯಾಗಿದೆ. ಕಾರಿನಲ್ಲಿ ಕುಳಿದ್ದ ಮತ್ತೊಬ್ಬ ವ್ಯಕ್ತಿ ಇದನ್ನೆಲ್ಲ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾನೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
https://www.instagram.com/reel/CadhZe8Dq1q/?utm_source=ig_embed&ig_rid=42180d1d-6360-4262-8cad-6d0b8a7f850d