ಬಾಲಿವುಡ್‌ನ ಶೆಹನ್‌ಶಾ ಅಮಿತಾಭ್ ಬಚ್ಚನ್‌ರನ್ನೇ ಹೋಲುವ ಅಫ್ಘಾನಿಸ್ತಾನದ ನಿರಾಶ್ರಿತನೊಬ್ಬನ ಫೋಟೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಛಾಯಾಗ್ರಾಹಕ ಸ್ಟೀವ್ ಮೆಕ್‌ಕ್ಯುರಿ ಈ ಫೋಟೋವನ್ನ ಶೇರ್ ಮಾಡಿದ್ದರು. ತನ್ನ ಬಲಗಣನ್ನು ಮುಚ್ಚುವ ಪೇಟವೊಂದನ್ನು ಧರಿಸಿರುವ ವ್ಯಕ್ತಿ ಈತ. ದುಂಡಗಿನ ಆಕಾರದ ಕನ್ನಡಕವನ್ನು ಧರಿಸಿದ್ದಾನೆ, ಬಿಳಿ ಗಡ್ಡದ ಆತನ ಲುಕ್ ಥೇಟ್ ಬಿಗ್‌ಬಿಯಂತೆಯೇ ಕಾಣ್ತಿದೆ.
ಮೊದಲ ನೋಟದಲ್ಲಂತೂ ಆತನೇ ಅಮಿತಾಭ್ ಎಂದು ಎಷ್ಟೋ ಮಂದಿ ಅಂದುಕೊಂಡಿರಬಹುದು. ಗಮನವಿಟ್ಟು ನೋಡಿದಾಗ ಮಾತ್ರ ಆತ ಅಮಿತಾಭ್ ಬಚ್ಚನ್ ಅಲ್ಲ ಎಂಬುದು ಗೊತ್ತಾಗುತ್ತದೆ. ಅಫ್ಘಾನಿಸ್ತಾನದಲ್ಲಿನ ಮಾನವೀಯ ಬಿಕ್ಕಟ್ಟನ್ನು ತೆರೆದಿಟ್ಟಂತಿದೆ ಈ ಭಾವಚಿತ್ರ. ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಈ ಫೋಟೋವನ್ನು ಮ್ಯಾಕ್ ಕ್ಯುರಿ ಕ್ಲಿಕ್ಕಿಸಿದ್ದರಂತೆ.
“ಪಾಕಿಸ್ತಾನದಲ್ಲಿ ನೆಲೆಸಿರುವ ಅಫ್ಘನ್ ನಿರಾಶ್ರಿತ ಶಾಬುಜ್ ಅವರ ಈ ಭಾವಚಿತ್ರ, ಪ್ರಪಂಚದಾದ್ಯಂತದ ನಿರಾಶ್ರಿತರಾಗಿರೋ ಲಕ್ಷಾಂತರ ಜನರನ್ನು ನಮಗೆ ನೆನಪಿಸುತ್ತದೆ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಮ್ಯಾಕ್‌ಕ್ಯುರಿ ಹೆಸರಾಂತ ಛಾಯಾಗ್ರಾಹಕ. ಭಾವನೆಗಳನ್ನು ಬಿಚ್ಚಿಡುವಂತಹ ಸುಂದರ ಚಿತ್ರಗಳಿಂದ್ಲೇ ಏಷ್ಯಾದಲ್ಲಿ ಹೆಸರುವಾಸಿಯಾಗಿದ್ದಾರೆ. ಸುಮಾರು ನೂರು ಮಿಲಿಯನ್ ಜನರು ಮನೆ ಮಠ ಇಲ್ಲದೇ ನಿರಾಶ್ರಿತರಾಗಿದ್ದಾರೆ.
ಯಾವುದೇ ತಪ್ಪಿಲ್ಲದೆ, ದುರ್ಬಲ ಮತ್ತು ಅನಿಶ್ಚಿತ ಸಂದರ್ಭಗಳಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ನಿರಾಶ್ರಿತರನ್ನು ಬೆಂಬಲಿಸಲು ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸೋಣ ಎಂದವರು ಕರೆಕೊಟ್ಟಿದ್ದಾರೆ. ಛಾಯಾಗ್ರಾಹಕನ ಕಳಕಳಿ ಮತ್ತು ಅಮಿತಾಭ್‌ರನ್ನು ಹೋಲುವ ಭಾವಚಿತ್ರ ಎರಡನ್ನೂ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಬಿಗ್‌ಬಿ, 2018 ರಲ್ಲಿ ಚಲನಚಿತ್ರ ʼಥಗ್ಸ್ ಆಫ್ ಹಿಂದೂಸ್ತಾನ್ʼ ಚಿತ್ರದಲ್ಲಿ ಇದೇ ರೀತಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ಅಫ್ಘಾನ್ ನಿರಾಶ್ರಿತ ಥೇಟ್ ಅಮಿತಾಭ್‌ರಂತೆ ಕಾಣಿಸಿದ್ದಾನೆ.