ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡೆ…! ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ….! ಎಂಬ ಮಾತಿದೆ. ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಕಾರಣ ಜೋಗ ಜಲಪಾತ ತನ್ನ ವೈಭವವನ್ನು ಪಡೆದುಕೊಂಡಿದೆ.
ಈಗ ಸುರಿಯುತ್ತಿರುವ ಧಾರಾಕಾರ ಮಳೆ ಜೋಗ ಜಲಪಾತ ತನ್ನ ಎಂದಿನ ವೈಭವವನ್ನು ಮರುಕಳಿಸುವಂತೆ ಮಾಡಿದೆ. ನಾಲಕ್ಕೂ ಜಲಪಾತಗಳು ಈಗ ಧುಮ್ಮಿಕ್ಕಿ ಹರಿಯುತ್ತಿದೆ.