
ಮದ್ಯ ಪ್ರಿಯರಲ್ಲಿ ವೈನ್ ಕುಡಿಯುವವರು ಸ್ವಲ್ಪ ರಿಲ್ಯಾಕ್ಸ್ ಆಗಿರುತ್ತಾರೆ. ಏಕೆಂದರೆ ವೈನ್ ಕುಡಿದರೆ ದೇಹಕ್ಕೆ ಹಾನಿಯಾಗುವುದಿಲ್ಲ ಎಂದು ಬಹಳ ಜನ ನಂಬಿದ್ದಾರೆ.
ಆದರೆ ಒಂದು ಅಧ್ಯಯನದ ಪ್ರಕಾರ ಒಂದು ಬಾಟಲ್ ವೈನ್ ಕುಡಿದರೆ 10 ಸಿಗರೇಟ್ ಸೇದಿದಷ್ಟು ಕೆಟ್ಟದಂತೆ. ಅಧ್ಯಯನದಲ್ಲಿ ಇದು ತಿಳಿದು ಬಂದಿದೆ.
ಅದರಲ್ಲೂ ಮಹಿಳೆಯರಿಗೆ ಇದರ ಪರಿಣಾಮ ಜಾಸ್ತಿಯಂತೆ. ಏಕೆಂದರೆ ವೈನ್ ನಿಂದ ಸ್ತನ ಕ್ಯಾನ್ಸರ್ ಬರುವ ಸಂಭವ ಹೆಚ್ಚಂತೆ. ಏನೇ ಆಗಲಿ ಮದ್ಯದಿಂದ ಏನಾದರೊಂದು ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಮತ್ತೆ ಮತ್ತೆ ಗೊತ್ತಾಗುತ್ತಿದೆ.