alex Certify ವೈದ್ಯನಾಗಬೇಕೆಂಬ ಕನಸು ಹೊತ್ತು ಉಕ್ರೇನ್​ಗೆ ತೆರಳಿ ದುರ್ಮರಣಕ್ಕೀಡಾದ ಕನ್ನಡಿಗ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯನಾಗಬೇಕೆಂಬ ಕನಸು ಹೊತ್ತು ಉಕ್ರೇನ್​ಗೆ ತೆರಳಿ ದುರ್ಮರಣಕ್ಕೀಡಾದ ಕನ್ನಡಿಗ ವಿದ್ಯಾರ್ಥಿ

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸಾಕಷ್ಟು ಪ್ರಯತ್ನ ಪಡುತ್ತಿದೆ. ಈಗಾಗಲೇ ಏರ್​ ಇಂಡಿಯಾ ವಿಮಾನಗಳಲ್ಲಿ ಉಕ್ರೇನ್​ನಲ್ಲಿ ಸಿಲುಕಿರುವ ಸಾಕಷ್ಟು ಮಂದಿಯನ್ನು ತಾಯ್ನಾಡಿಗೆ ಕರೆತರುವ ಪ್ರಯತ್ನ ಮಾಡಲಾಗಿದೆ.

ಆಪರೇಷನ್ ಗಂಗಾ ಕಾರ್ಯಾಚರಣೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಉಕ್ರೇನ್​ನ ಪರಿಸ್ಥಿತಿಯ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಪಡೆದುಕೊಳ್ಳುತ್ತಿರೋದ್ರ ಜೊತೆ ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಇನ್ನಿಲ್ಲದ ಸಾಹಸವನ್ನು ಮಾಡುತ್ತಿದೆ.

ಈ ಎಲ್ಲ ಪ್ರಯತ್ನಗಳ ನಡುವೆ ಇಂದು ಮುಂಜಾನೆ ಪೂರ್ವ ಉಕ್ರೇನ್​ ಖಾರ್ಕಿವ್​ ಪ್ರದೇಶದಲ್ಲಿ ರಷ್ಯಾದ ಶೆಲ್​ ದಾಳಿಯಲ್ಲಿ ಹಾವೇರಿ ಮೂಲದ ವಿದ್ಯಾರ್ಥಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಈ ವಿದ್ಯಾರ್ಥಿಯ ಸಾವಿನ ವಾರ್ತೆಯನ್ನು ಕೇಂದ್ರ ವಿದೇಶಾಂಗ ಸಚಿವಾಲಯ ಟ್ವೀಟ್​ ಮೂಲಕ ಧೃಡಪಡಿಸಿದೆ. ಮೃತ ನವೀನ್​ ಶೇಖರಪ್ಪ ಉಕ್ರೇನ್​​ನಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು ಎನ್ನಲಾಗಿದೆ.

ಕನ್ನಡಿಗ ನವೀನ್​ ಶೇಖರಪ್ಪರ ಸಾವು ಇದೀಗ ಕೇಂದ್ರ ಸರ್ಕಾರಕ್ಕೆ ಆಪರೇಷನ್​ ಗಂಗಾ ಕಾರ್ಯಾಚರಣೆಗೆ ಇನ್ನಷ್ಟು ಚುರುಕು ಮುಟ್ಟಿಸುವಂತೆ ಮಾಡಿದೆ. ಕನ್ನಡಿಗ ವಿದ್ಯಾರ್ಥಿಯ ಸಾವಿನ ಬೆನ್ನಲ್ಲೇ ಪ್ರಧಾನಿ ಮೋದಿ ಸತತ ನಾಲ್ಕನೇ ಬಾರಿಗೆ ಉಕ್ರೇನ್​ ವಿಚಾರವಾಗಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 300 ಕಿಲೋಮೀಟರ್ ದೂರದಲ್ಲಿರುವ ಹಾವೇರಿ ಜಿಲ್ಲೆಯ ನವೀನ್​ ಶೇಖರಪ್ಪ ಗ್ಯಾಂದಗೌಡರ್​​ 21 ವರ್ಷ ಪ್ರಾಯದ ವಿದ್ಯಾರ್ಥಿಯಾಗಿದ್ದರು. ಇವರು ಖಾರ್ಕಿವ್​ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...