
ಅಮೆರಿಕದ ಶ್ವೇತಭವನ ಅದ್ಧೂರಿ ಮದುವೆಗೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಮೊಮ್ಮಗಳ ವಿವಾಹ ನೆರವೇರಿದೆ. ನವೋಮಿ ಬೈಡೆನ್, ಪೀಟರ್ ನೀಲ್ ಜೊತೆ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಸೌತ್ ಲಾನ್‌ನಲ್ಲಿ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು.
ಅದೊಂದು ಖಾಸಗಿ ಕಾರ್ಯಕ್ರಮ ಜೊತೆಗೆ ಶ್ವೇತಭವನದ ಇತಿಹಾಸದಲ್ಲಿ ನಡೆದ 19ನೇ ವಿವಾಹ ಸಮಾರಂಭ. ಒಂದು ದಶಕದ ಬಳಿಕ ಶ್ವೇತಭವನದಲ್ಲಿ ವಿವಾಹ ಮಹೋತ್ಸವ ನಡೆದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತವರ ಪತ್ನಿ ಜಿಲ್ ಬೈಡನ್, ಮೊಮ್ಮಗಳಿಗೆ ಆಶೀರ್ವದಿಸಿದ್ದಾರೆ. ಇಬ್ಬರೂ ಮೊಮ್ಮಗಳ ವಿವಾಹ ಸಮಾರಂಭದಲ್ಲಿ ಹಾಜರಿದ್ದರು.
ಬೈಡನ್ ಕುಟುಂಬದ ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಎಕ್ಸಿಕ್ಯೂಟಿವ್ ಮ್ಯಾನ್ಷನ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. 2021ರಲ್ಲೇ ನವೋಮಿ ಬೈಡನ್ ಮತ್ತು ಪೀಟರ್ ನಿಶ್ಚಿತಾರ್ಥವಾಗಿತ್ತು. ಈ ವರ್ಷದ ಆರಂಭದಲ್ಲಿ ಮದುವೆಯ ಸ್ಥಳವೂ ನಿಗದಿಯಾಗಿತ್ತು. 28 ವರ್ಷದ ನವೋಮಿ ಬೈಡನ್ ಕೊಲಂಬಿಯಾ ಕಾನೂನು ಪದವಧರೆ. ಪೀಟರ್ ಸಹ ಕಾನೂನು ಅಧ್ಯಯನ ಮಾಡಿದ್ದು, ಈ ಹಿಂದೆ ಶ್ವೇತಭವನದಲ್ಲಿ ತರಬೇತಿ ಪಡೆದಿದ್ದರು.