ಮಲೇಷ್ಯಾದ ಭರತನಾಟ್ಯ ಗುರು ಶ್ರೀ ಗಣೇಶನ್ ಅವರು ಭುವನೇಶ್ವರದಲ್ಲಿ ವೇದಿಕೆಯ ಮೇಲೆಯೇ ಕುಸಿದು ಮೃತಪಟ್ಟಿದ್ದಾರೆ.
ಭುವನೇಶ್ವರದ ಭಂಜಕಲಾ ಮಂಟಪದಲ್ಲಿ ಪ್ರದರ್ಶನದ ನಂತರ ವೇದಿಕೆಯ ಮೇಲೆ ಕುಸಿದು ಬಿದ್ದು ಮಲೇಷ್ಯಾದ ಭರತನಾಟ್ಯ ಗುರು ಶ್ರೀ ಗಣೇಶನ್ ಸಾವನ್ನಪ್ಪಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಜಗಬಂಧು ಜೆನಾ ತಿಳಿಸಿದ್ದಾರೆ.
ವೇದಿಕೆಯ ಮೇಲೆ ಕುಸಿದು ಬಿದ್ದ ನಂತರ ಅವರನ್ನು ಭುವನೇಶ್ವರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಜೆನಾ ಮಾಹಿತಿ ನೀಡಿದರು. ಶ್ರೀ ಗಣೇಶನ್ ಅವರು ಶಾಸ್ತ್ರೀಯ ನೃತ್ಯ ಉತ್ಸವದಲ್ಲಿ ಭಾಗವಹಿಸಲು ಭುವನೇಶ್ವರದಲ್ಲಿದ್ದರು.
63 ವರ್ಷದ ಗಣೇಶನ್ ಅವರು ತಮ್ಮ ಭೇಟಿಯ ಮೂರನೇ ದಿನದಂದು ವೇದಿಕೆಯಲ್ಲಿ ಎರಡನೇ ಹಂತದ ನೃತ್ಯ ಪ್ರದರ್ಶನದ ಮೊದಲು ದೀಪವನ್ನು ಬೆಳಗಿಸುವಾಗ ಪ್ರಜ್ಞಾಹೀನರಾದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಯಲಿಲ್ಲ.
1979 ಮತ್ತು 1987 ರ ನಡುವೆ ಮದ್ರಾಸಿನ ಸಾರಸ್ಲಯದ ಗುರು ಕೆ.ಜೆ.ಸರಸ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿತ ಗಣೇಶನ್ ಅವರು ತಮ್ಮ ಜೀವನವನ್ನು ನೃತ್ಯ ಪ್ರಕಾರಕ್ಕೆ ಮುಡಿಪಾಗಿಟ್ಟರು. 1987 ರಲ್ಲಿ ಅವರು ಕೌಲಾಲಂಪುರದಲ್ಲಿ ‘ಶ್ರೀ ಗಣೇಶಾಲಯ’ವನ್ನು ಪ್ರಾರಂಭಿಸಿದರು. ಅಲ್ಲಿ ಇಲ್ಲಿಯವರೆಗೆ 3,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಕಲಿತಿದ್ದಾರೆ. ಶ್ರೀ ಗಣೇಶಾಲಯ ರಾಮಾಯಣದಂತಹ ಹಲವಾರು ನೃತ್ಯ ನಾಟಕಗಳನ್ನು ಒಳಗೊಂಡಂತೆ 350 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಿರ್ಮಿಸಿದೆ. 1991 ರಲ್ಲಿ ಥಾಯ್ ರಾಜಕುಮಾರಿಯ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಅಂತರರಾಷ್ಟ್ರೀಯ ರಾಮಾಯಣ ನೃತ್ಯ ಉತ್ಸವದಲ್ಲಿ 20 ನೃತ್ಯಗಾರರೊಂದಿಗೆ ಅವರ ತಂಡವು ಮಲೇಷ್ಯಾವನ್ನು ಪ್ರತಿನಿಧಿಸಿತು.