ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಶೀಘ್ರದಲ್ಲೇ ನೌಕರರ ಫಿಟ್ ಮೆಂಟ್ ಅಂಶ ಹೆಚ್ಚಿಸಲು ಚಿಂತನೆ ನಡೆಸಲಾಗಿದ್ದು, ಈ ಕುರಿತ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಫಿಟ್ ಮೆಂಟ್ ಅಂಶ ಮೂರು ಪಟ್ಟು ಹೆಚ್ಚಿಸುವಂತೆ ಕೇಂದ್ರ ಸರ್ಕಾರಿ ನೌಕರರು ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿದ್ದು, ಇದು ಜಾರಿಯಾದರೆ ನೌಕರರ ಕನಿಷ್ಠ ವೇತನ 26 ಸಾವಿರ ರೂಪಾಯಿಗಳಗಿಂತಲೂ ಅಧಿಕವಾಗಲಿದೆ.
ಈ ಮೊದಲು ಕನಿಷ್ಠ ವೇತನವನ್ನು 6 ಸಾವಿರದಿಂದ 18 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು, ಏಳನೇ ವೇತನ ಆಯೋಗದ ಅನುಸಾರ ಫಿಟ್ ಮೆಂಟ್ ಅಂಶ ಪ್ರಸ್ತುತ 2.57 ರಷ್ಟಿದೆ. ಇದು 3.68ರಷ್ಟು ಹೆಚ್ಚಾದ ಪಕ್ಷದಲ್ಲಿ ಭತ್ಯೆಯನ್ನು ಹೊರತುಪಡಿಸಿ ವೇತನವೇ 95,680 ರೂಪಾಯಿ ಸಿಗಲಿದೆ ಎಂದು ಹೇಳಲಾಗಿದೆ. ಆದರೆ ಫಿಟ್ ಮೆಂಟ್ ಅಂಶ ಹೆಚ್ಚಳ ಕುರಿತು ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.