ಬೆಂಗಳೂರು: ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನಾಗಿ ಎಂ. ಮದನ ಗೋಪಾಲ್ ಅವರನ್ನು ನೇಮಕ ಮಾಡಲಾಗಿದೆ.
ವಿಶೇಷವೆಂದರೆ ಈ ಹುದ್ದೆಗಾಗಿ ಮದನ ಗೋಪಾಲ್ ಯಾವುದೇ ರೀತಿಯ ಸಂಬಳ ಪಡೆಯುತ್ತಿಲ್ಲ ಎಂಬುದು. ಈ ಬಗ್ಗೆ ಸ್ವತಃ ಮದನ ಗೋಪಾಲ್ ಸ್ಪಷ್ಟಪಡಿಸಿದ್ದು, ತಾವು ಸದರಿ ಹುದ್ದೆಗಾಗಿ ಯಾವುದೇ ರೀತಿಯ ವೇತನವಾಗಲಿ, ಇತರೆ ಭತ್ಯೆಯನ್ನಾಗಲಿ ಪಡೆಯಲು ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾರೆ.
ನವೀನ್ ಪಟ್ನಾಯಕ್ ಬಳಿಕ ʼಕೊರೊನಾʼ ಲಸಿಕೆ ಪಡೆದ ಮತ್ತೊಬ್ಬ ಮುಖ್ಯಮಂತ್ರಿ
ಸರ್ಕಾರದಿಂದ ಗೌರವ ಧನವಾಗಿ ಒಂದು ರೂಪಾಯಿಯನ್ನು ಮಾತ್ರ ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.