ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವ ಹಣ್ಣು ಲಿಚಿ. ಕೆಲವರಿಗೆ ಈ ಹಣ್ಣಿನ ಪ್ರಯೋಜನಗಳು ಗೊತ್ತಿಲ್ಲದೇ ಇರಬಹುದು, ಆದ್ರೆ ಅದರ ಸುಂದರವಾದ ಈ ಹಣ್ಣು ಎಂಥವರನ್ನೂ ಆಕರ್ಷಿಸುತ್ತದೆ. ಲಿಚಿ ಹಣ್ಣುಗಳನ್ನು ಸೇವನೆ ಮಾಡುವದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಇದರಿಂದ ಕ್ಯಾನ್ಸರ್ ಅಪಾಯ ಕೂಡ ಕಡಿಮೆಯಾಗುತ್ತದೆ.
ಲಿಚಿ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಕ್ಯಾನ್ಸರ್ ಕೂಡ ನಿಮ್ಮ ಹತ್ತಿರಕ್ಕೆ ಸುಳಿಯುವುದಿಲ್ಲ. ಲಿಚಿ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆರೋಗ್ಯಕರ ಮತ್ತು ರುಚಿಕರವಾದ ಹಣ್ಣುಗಳಲ್ಲಿ ಒಂದಾಗಿದೆ. ಲಿಚಿಯನ್ನು ಹಣ್ಣುಗಳ ರಾಣಿ ಎಂದೂ ಕರೆಯುತ್ತಾರೆ. ಈ ಹಣ್ಣು ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ಊಟವಾದ ನಂತರ ಲಿಚಿ ಹಣ್ಣನ್ನು ತಿಂದರೆ ಅದು ಅಮೃತದಂತೆ ಕಾರ್ಯನಿರ್ವಹಿಸುತ್ತದೆ.
ಲಿಚಿ ಹಣ್ಣಿನಲ್ಲಿ ವಿಟಮಿನ್ ಸಿ, ಖನಿಜಾಂಶಗಳು ಹೇರಳವಾಗಿವೆ. ಇದು ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡಬಲ್ಲದು. ಎಂಟಿವೈರಲ್ ಗುಣಲಕ್ಷಣಗಳು ಸಹ ಇದರಲ್ಲಿವೆ. ಇತ್ತೀಚಿನ ದಿನಗಳಲ್ಲಿ ಹೊಟ್ಟೆಯ ಬೊಜ್ಜಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೊಟ್ಟೆಯ ಬೊಜ್ಜು ಜಾಸ್ತಿಯಾದ್ರೆ ಮುಂದೆ ಅಸ್ತಮಾ ಸಮಸ್ಯೆ ಬರಬಹುದು. ದೇಹಕ್ಕೆ ಬೇಗನೆ ಆಯಾಸವಾಗುತ್ತದೆ. ಲಿಚಿ ಹಣ್ಣುಗಳನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.
ಲಿಚಿ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಲಿಚಿ ಹಣ್ಣಿನ ಜ್ಯೂಸ್ ಸೇವನೆ ಮಾಡಬೇಕು. ಲಿಚಿ ಜ್ಯೂಸ್‌ನಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಿರುತ್ತದೆ. ಇದು ನಿಮ್ಮ ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ. ಲಿಚಿ ಹಣ್ಣುಗಳಲ್ಲಿ ನೀರಿನಂಶ ಜಾಸ್ತಿಯಿದೆ. ಹಾಗಾಗಿ ದೇಹವನ್ನು ಇದು ಹೈಡ್ರೇಟ್ ಆಗಿ ಇಡುತ್ತದೆ. ಹೊಟ್ಟೆಯ ಶಾಖವನ್ನು ಸಹ ಶಾಂತಗೊಳಿಸುತ್ತದೆ.