ಫಿಟ್ ಆಗಿರಲು ದೇಹಕ್ಕೆ ಹಲವಾರು ರೀತಿಯ ವಿಟಮಿನ್‌ಗಳು ಬೇಕಾಗುತ್ತವೆ. ಕಾರ್ನ್ ಕೂಡ ನಮ್ಮನ್ನು ಆರೋಗ್ಯವಾಗಿಡಬಲ್ಲ ಆಹಾರಗಳಲ್ಲೊಂದು. ಇದರಲ್ಲಿ ಸಾಕಷ್ಟು ನಾರಿನಂಶವಿದೆ. ಹೊಟ್ಟೆಯ ಆರೋಗ್ಯಕ್ಕೂ ಇದು ಪ್ರಯೋಜನಕಾರಿ.
ಕಣ್ಣುಗಳಿಗೆ ಪ್ರಯೋಜನಕಾರಿ – ಕಣ್ಣುಗಳನ್ನು ಆರೋಗ್ಯವಾಗಿಟ್ಟುಕೊಳ್ಳಲು ಕಾರ್ನ್ ಅನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಇದು ಬಹಳಷ್ಟು ಲುಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಜೋಳದ ಸೇವನೆಯಿಂದ ದೃಷ್ಟಿಶಕ್ತಿ ಹೆಚ್ಚುತ್ತದೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅವಶ್ಯವಾಗಿ ಕಾರ್ನ್ ತಿನ್ನಿ.
ಜೀರ್ಣಕ್ರಿಯೆಗಾಗಿ – ಕಾರ್ನ್ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ. ಏಕೆಂದರೆ ಇದರಲ್ಲಿ ಫೈಬರ್ ಅಂಶ ಹೇರಳವಾಗಿದೆ. ಮಲವಿಸರ್ಜನೆಯ ಸಮಸ್ಯೆಗಳಿದ್ದರೆ ಕಾರ್ನ್ ಅನ್ನು ಸೇವಿಸಬಹುದು.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ – ಕಾರ್ನ್ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ತೂಕ ಇಳಿಕೆ – ಜೋಳವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ. ಇದು ಬಹಳಷ್ಟು ಫೈಬರ್ ಅನ್ನು ಹೊಂದಿರುವುದರಿಂದ ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ. ಮತ್ತೆ ಮತ್ತೆ ಹಸಿವಿನ ಅನುಭವವಾಗುವುದಿಲ್ಲ. ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.