ನೀವೇನಾದ್ರೂ ಟ್ರಾಫಿಕ್ ಜಂಪ್ ಮಾಡಿದ್ರೆ, ಅಥವಾ ಇನ್ನಿತರೆ ಕಾರಣಗಳಿಂದ ಟ್ರಾಫಿಕ್ ಪೊಲೀಸ್ ನಿಮ್ಮನ್ನು ಹಿಂಬಾಲಿಸಿ ಹಿಡಿದಾಗ ನೀವು ಏನು ಉತ್ತರ ಕೊಡುವಿರಾ..? ರಷ್ಯಾದ ಅಧ್ಯಕ್ಷರೋ ಅಥವಾ ಪ್ರಧಾನಿ ಮೋದಿ ಮೇಲೋ ದೂಷಿಸುತ್ತೀರಾ..? ಇಲ್ಲ ಅಲ್ವಾ..? ಆದ್ರೆ, ಅಮೆರಿಕಾದ ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬ ಏನು ಮಾಡಿದ ಗೊತ್ತಾ..?
ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡಿದ ಭೂಪನೊಬ್ಬ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ದೂಷಿಸಿರುವ ವಿಲಕ್ಷಣ ಘಟನೆ ನಡೆದಿದೆ. ರಷ್ಯಾ-ಉಕ್ರೇನ್ ಯುದ್ಧದ ಸುದ್ದಿಯನ್ನು ನೋಡುವುದಕ್ಕಾಗಿ ತಾನು ಮನೆಗೆ ಹಿಂತಿರುಗುತ್ತಿದ್ದೇನೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಫೇಸ್‌ಬುಕ್‌ನಲ್ಲಿ ಫ್ಲಾಗ್ಲರ್ ಕೌಂಟಿ ಶೆರಿಫ್ ಕಚೇರಿ ವಿಡಿಯೋ ತುಣಕನ್ನು ಹಂಚಿಕೊಂಡಿದೆ. ಪುಟಿನ್ ತನ್ನನ್ನು ಈ ರೀತಿಯಾಗಿ ಮಾಡುವಂತೆ ಮಾಡಿದ್ದಾರೆ ಎಂದು ದೂರಿದ್ದಾನೆ.
ಪುಟಿನ್ ಉಕ್ರೇನ್ ವಿರುದ್ಧ ಥರ್ಮೋನ್ಯೂಕ್ಲಿಯರ್ ಯುದ್ಧವನ್ನು ಪ್ರಾರಂಭಿಸಲಿದ್ದಾರೆ ಎಂಬುದು ತಿಳಿಯಿತು. ಹೀಗಾಗಿ ಏನಾಗುತ್ತಿದೆ ಎಂದು ಚಡಪಡಿಕೆ ಶುರುವಾಯ್ತು. ನಂತರ ಈ ಬಗ್ಗೆ ತಿಳಿಯುವುದಕ್ಕಾಗಿ ವೇಗವಾಗಿ ಮನೆ ಕಡೆಗೆ ಕಾರನ್ನು ಚಲಾಯಿಸಿದ್ದಾಗಿ ಆತ ಹೇಳಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವ್ಯಂಗ್ಯಭರಿತ ಕಾಮೆಂಟ್ ಗಳನ್ನು ಮಾಡಿದ್ದಾರೆ. ಕೆಲವು ಬಳಕೆದಾರರು, ಟ್ರಂಪ್ ಅವರನ್ನು ದೂಷಿಸದಿರುವುದು ಅಚ್ಚರಿ ತಂದಿದೆ ಎಂದು ಟೀಕಿಸಿದ್ದಾರೆ.