ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ 2, ಈರುಳ್ಳಿ 4, ದೊಡ್ಡ ಮೆಣಸಿನಕಾಯಿ 4, ಹಸಿ ಖಾರ ಅರ್ಧ ಚಮಚ, ಗರಂ ಮಸಾಲ 1 ಚಮಚ, ಬ್ರೆಡ್ 1 ಪೌಂಡ್, ತುರಿದ ಪನ್ನೀರ್ 50 ಗ್ರಾಂ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ 1 ಚಮಚ, ನಿಂಬೆಹಣ್ಣು 1, ಬೀನ್ಸ್ ಸ್ವಲ್ಪ, ಬೀಟ್ ರೂಟ್, ಕ್ಯಾರೆಟ್ ಸ್ವಲ್ಪ, ಬೆಣ್ಣೆ 1 ಬಟ್ಟಲು.
ಮಾಡುವ ವಿಧಾನ: ಮೊದಲು ಆಲೂಗಡ್ಡೆ, ಬೀನ್ಸ್ ಬೇಯಿಸಿ, ಬೀಟ್ ರೂಟ್, ಕ್ಯಾರೆಟ್ ತುರಿದುಕೊಳ್ಳಿ. ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ ಕಾಯಿಸಿ ಅದರಲ್ಲಿ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ.
ತುರಿದ ತರಕಾರಿಗಳನ್ನು ಹಾಕಿ ಚೆನ್ನಾಗಿ ಕಲೆಸಿ ಅವು ಎಲ್ಲಾ ಬೆಂದ ಮೇಲೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಹಸಿ ಖಾರ, ತುರಿದ ಪನ್ನೀರ್, ಗರಂ ಮಸಾಲ, ಉಪ್ಪು ನಿಂಬೆರಸ ಸೇರಿಸಿ ಬೇಯಿಸಿದ ಆಲೂಗಡ್ಡೆ ಹಾಗೂ ಬೀನ್ಸ್ ಹಾಕಿ ಪಲ್ಯ ಮಾಡಿಕೊಳ್ಳಿ. ಬ್ರೆಡ್ ಸ್ಲೈಸ್ ತೆಗೆದುಕೊಂಡು ಒಂದು ಕಡೆ ಬೆಣ್ಣೆ ಹಚ್ಚಿ ಎರಡನ್ನು ಜೋಡಿಸಿ ಹಂಚಿಗೆ ಬೆಣ್ಣೆ ಹಚ್ಚಿ, ಮಾಡಿದ ಪಲ್ಯವನ್ನು ಬ್ರೆಡ್ ನಲ್ಲಿ ತುಂಬಿ ಫ್ರೈ ಮಾಡಿ.