ರಾಮನಗರ: ಇವನೆಂಥ ನಿಷ್ಕರುಣಿ ಮಗ…! ಆಸ್ತಿಗಾಗಿ ಅಪ್ಪನನ್ನು ಮನಬಂದಂತೆ ಥಳಿಸಿ ಮನೆಯಿಂದ ಎಳೆದು ತಂದು ಹೊರ ಹಾಕಿರುವ ಘಟನೆ ರಾಮನಗರದ ಸಿಂಗ್ರಾಬೋವಿಯಲ್ಲಿ ಬೆಳಕಿಗೆ ಬಂದಿದೆ.
ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಕುಮಾರ ಎಂಬಾತ ತನ್ನ ತಂದೆಯನ್ನು ಥಳಿಸಿ ಮನೆಯಿಂದ ಹೊರ ಹಾಕಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
BIG NEWS: ಇಂದಿನ ರಾಜಕಾರಣದಿಂದ ಮನಸ್ಸಿಗೆ ನೋವಾಗುತ್ತಿದೆ; ಮಾತನಾಡಲು ಅಸಹ್ಯವಾಗುತ್ತಿದೆ ಎಂದ ಎಂ.ಪಿ.ರೇಣುಕಾಚಾರ್ಯ
ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ವೃದ್ಧ ತಂದೆ ತಿಮ್ಮಯ್ಯನ ಮೇಲೆ ದಬ್ಬಾಳಿಕೆ ಮಾಡಿ ದರ್ಪ ಮೆರೆದಿದ್ದಾನೆ. ಹಲವು ತಿಂಗಳಿಂದ ಮನೆಯನ್ನು ತನಗೆ ನೀಡುವಂತೆ ಕುಮಾರ ಒತ್ತಡ ಹಾಕುತ್ತಿದ್ದ. ಅದಕ್ಕೆ ತಂದೆ ಒಪ್ಪದಿದ್ದಾಗ ದಿನನಿತ್ಯ ಅಪ್ಪನಿಗೆ ಹೊಡೆದು ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ. ಇದೀಗ ಅಪ್ಪನನ್ನು ಎಳೆದು ಮನೆಯಿಂದ ಹೊರ ಹಾಕಿದ್ದಾನೆ ಎಂದು ತಿಳಿದು ಬಂದಿದೆ.