
ಸುಡುಸುಡೋ ಬಿಸಿಲಿನಲ್ಲಿ ಎರಡೇ ಎರಡು ನಿಮಿಷ ಓಡಾಡಿದ್ರೆ, ಎಂಥವರೂ ಕೂಡಾ ಸುಸ್ತಾಗಿ ಬಿಡ್ತಾರೆ. ಎಲ್ಲಾದ್ರೂ ಚೂರು ನೆರಳು, ಕೊಂಚ ತಂಪಾದ ಗಾಳಿ ಸಿಕ್ಕರೆ ಆ ಕ್ಷಣಕ್ಕೆ ಅದೇ ಸ್ವರ್ಗ ಸುಖ. ಆದರೆ ಎಲ್ಲಾ ಸಮಯದಲ್ಲಿ ನೆರಳು-ಗಾಳಿ ಸಿಗಬೇಕಲ್ಲ. ಇಂಥ ಸಮಸ್ಯೆ ದೂರ ಮಾಡಲೆಂದೇ ಈಗ ಹೊಸ ಐಡಿಯಾ ಒಂದನ್ನ ಕಂಡು ಹಿಡಿದಿದ್ದಾರೆ ಈ ಸಾಧು ಅಜ್ಜ.
ಈ ಅಜ್ಜ ಸೂರ್ಯನ ಧಗಧಗಿಸೋ ಬೆಳಕು ಮುಖದ ಮೇಲೆ ಬೀಳದಿರುವಂತೆ ತಡೆಯಲು ಮತ್ತು ಗಾಳಿ ಮುಖದ ಮೇಲೆಯೇ ಸದಾ ಬೀಸುತ್ತಿರಲಿ ಅಂತಾನೇ ಫ್ಯಾನ್ ಒಂದನ್ನ ತಲೆಗೆ ಕಟ್ಟಿಕೊಂಡಿದ್ದಾರೆ. ಫ್ಯಾನ್ ದಿಕ್ಕು ಮುಖದ ಕಡೆ ಇದ್ದರೆ, ಸೋಲಾರ್ ಪ್ಲೇಟ್ ಹಿಂಬಾಗದಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಈಗ ಇದೇ ಸಾಧು ಅಜ್ಜನ ಸೂಪರ್ ಐಡಿಯಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಯಸ್ಸಾದ ಸನ್ಯಾಸಿ ವಿಡಿಯೋ, ಧರ್ಮೇಂದ್ರ ರಜಪೂತ್ ಅವರ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಶೀರ್ಷಿಕೆಯಲ್ಲಿ‘ಇದು ಸೌರಶಕ್ತಿಯ ಸರಿಯಾದ ಬಳಕೆ, ತಲೆಯ ಮೇಲೆ ಸೋಲಾರ್ ಪ್ಲೇಟ್ ಮತ್ತು ಫ್ಲ್ಯಾನ್ ಹಾಕಿಕೊಂಡು ಸನ್ಯಾಸಿ ಬಾಬಾ ತಂಪಾದ ಗಾಳಿಯನ್ನ ಎಂಜಾಯ್ ಮಾಡುತ್ತಿದ್ದಾರೆ. ಈ ಐಡಿಯಾ ತಮಗೆ ಬಂದಿದ್ದಾದರೂ ಹೇಗೆ ಅಂತ ಕೇಳಿದರೆ ಈ ಸಾಧು ಸುಡೋ ಬಿಸಿಲು ಹಾಗೂ ಬಿಸಿ ಗಾಳಿಯಿಂದ ತಪ್ಪಿಸಿಕೊಳ್ಳಲು ಈ ಐಡಿಯಾ. ಸೌರ ಶಕ್ತಿಯಿಂದ ಈ ಫ್ಯಾನ್ ಓಡುವುದರಿಂದ ಖರ್ಚು ಕೂಡಾ ಇಲ್ಲ ಅಂತ ಹೇಳುತ್ತಾರಂತೆ.
ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲೇ ಬಿಸಿಲು, ಬೆವರು, ಬಿಸಿ ಗಾಳಿ ತಪ್ಪಿಸಿಕೊಳ್ಳಲು ಮಾಡಿರೋ ಐಡಿಯಾ ನೋಡಿ ಎಲ್ಲರೂ ಶಾಕ್ ಆಗಿದ್ದಂತೂ ಸುಳ್ಳಲ್ಲ. ಅವಶ್ಯಕತೆಗಳೇ ಹೊಸ ಹೊಸ ಆವಿಷ್ಕಾರ ಹುಟ್ಟು ಹಾಕುತ್ತೆ ಅನ್ನೊದಕ್ಕೆ ಈ ವಿಡಿಯೋ ಕೂಡ ಒಂದು ಉತ್ತಮ ಉದಾಹರಣೆ.