ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟವನ್ನು ಸುಟ್ಟ ವಿಚಾರಕ್ಕೆ ಇಲ್ಲೊಬ್ಬ ಕನ್ನಡಿಗ ವಿದೇಶದಲ್ಲಿ ಅದಕ್ಕೆ ತಿರುಗೇಟು ನೀಡಿದ್ದಾರೆ. ವಿದೇಶದ ಆಗಸದಲ್ಲಿ ಕನ್ನಡ ಬಾವುಟವನ್ನ ಎತ್ತರದಲ್ಲಿ ಹಾರಿಸಿ, ಯಾರು ಏನೇ ಮಾಡಿದರು ಕನ್ನಡ ಬಾವುಟ ಎತ್ತರದಲ್ಲಿ ಹಾರೋ ಸ್ವಾಭಿಮಾನಿಗಳ ಧ್ವಜ ಎಂದು ತೋರಿಸಿದ್ದಾರೆ.
ಎಂಇಎಸ್ ಪುಂಡರು ಕನ್ನಡ ಬಾವುಟವನ್ನ ಸುಟ್ಟು ಅವಮಾನ ಮಾಡಿದ್ದಕ್ಕೆ, ಸ್ಕೈಡೈವ್ ಮಾಡಿ ಆಕಾಶದ ಎತ್ತರದಲ್ಲಿ ಕನ್ನಡ ಧ್ವಜವನ್ನ ಹಾರಿಸಿರುವ ಈತ ಬೆಂಗಳೂರಿನ ಕನ್ನಡಿಗ.
ನಗರದ ನಾಗರಬಾವಿಯ ನಿವಾಸಿಯಾಗಿದ್ದ ಪುರುಷೋತ್ತಮ್ ಶಾಮಾಚಾರ್, ಸದ್ಯ ಥಾಯ್ಲ್ಯಾಂಡ್ನಲ್ಲಿ ಟೆಕ್ನಿಕಲ್ ಇಂಜಿನಿಯರ್ ಆಗಿದ್ದಾರೆ. ಪುಂಡರಿಂದ ಕನ್ನಡ ಬಾವುಟಕ್ಕೆ ಅವಮಾನ ಆಗಿದ್ರಿಂದ ಬೇಸರಗೊಂಡು ಆಗಸದಲ್ಲಿ ಕನ್ನಡ ಬಾವುಟ ರಾರಾಜಿಸುವಂತೆ ಮಾಡಿದ್ದಾರೆ.
14 ಸಾವಿರ ಮೀಟರ್ (14 ಕಿಲೋಮೀಟರ್) ಎತ್ತರದಿಂದ ಸ್ಕೈ ಡೈವ್ ಮಾಡಿ ಕನ್ನಡ ಬಾವುಟ ಹಾರಿಸಿರೊ ವೀರಕನ್ನಡಿಗ ಈ ಮೂಲಕ ನಮ್ಮ ನಾಡುನುಡಿ ನಮಗೆಷ್ಟು ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಸ್ಕೈಡೈವ್ ಮಾಡುವುದಕ್ಕು ಮುನ್ನ ಕೈಯ್ಯಲ್ಲಿ ಕನ್ನಡ ಧ್ವಜ ಹಿಡಿದು, ಬೇರೆಯವರು ನಮ್ಮ ಧ್ವಜವನ್ನ ಸುಟ್ಟುಹಾಕಿದ್ರೆ ನಾವು ಆಕಾಶ ಮುಟ್ಟುವವರೆಗೂ ನಮ್ಮ ಬಾವುಟ ಹಾರಿಸುತ್ತೇವೆ. ಎಲ್ಲಾದರು ಎಂತಾದರು ಇರು ಎಂದಿಂದಿಗು ಕನ್ನಡವಾಗಿರು ಎಂದು ವಿಡಿಯೋ ಮಾಡಿರುವ ಪುರುಷೋತ್ತಮ್ ಕನ್ನಡಿಗರ ಬಾವುಟ ಸುಟ್ಟ ತಕ್ಷಣ ಅದನ್ನ ಅಳಿಸಿ ಹಾಕೋಕೆ ಆಗಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ.
https://youtu.be/8kkuq4x8VZ4
https://youtu.be/DpsJtj26VK4