ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಿರೋ ಘಟನೆ ಭಾರತದಲ್ಲೇ ನಡೆದಿತ್ತು. ಇದೀಗ ಇಂಗ್ಲೆಂಡ್ನಲ್ಲಿ ಯುವತಿಯೊಬ್ಬಳು ವೀರ್ಯ ತುಂಬಿದ ಸಿರಿಂಜ್ ಸಹಾಯದಿಂದ ಗರ್ಭಿಣಿಯಾಗಿರೋದಾಗಿ ಹೇಳಿಕೊಂಡಿದ್ದಾಳೆ.
ಕಾಲ್ಪೋಲ್ ಸಿರಿಂಜ್ ಅನ್ನು ಸ್ವತಃ ವೀರ್ಯವನ್ನು ಚುಚ್ಚಲು ಬಳಸಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಕೇವಲ 19ನೇ ವಯಸ್ಸಿನಲ್ಲಿ ಈಕೆ ಗರ್ಭಿಣಿಯಾಗಿದ್ದಳು. ಆಕೆಗೀಗ 23 ವರ್ಷ, ಹೆಣ್ಣು ಮಗುವಿನ ತಾಯಿಯಾಗಿರೋ ಯುವತಿ, ತನ್ನ ಅನುಭವಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ಮ್ಯಾಂಚೆಸ್ಟರ್ನ ಶಾನನ್ ನಜರೋವಿಚ್, ಗರ್ಭಿಣಿಯಾಗಲು ಸಿರಿಂಜ್ ಅನ್ನು ಬಳಸಿದ್ದಾಳಂತೆ. ಶಾನನ್ ಈ ಪ್ರಕ್ರಿಯೆಯನ್ನು ‘ಹೋಮ್ ಇನ್ಸೆಮಿನೇಷನ್’ ಎಂದು ಕರೆದಿದ್ದಾಳೆ. ಆಕೆ ಒಪ್ಪಿಗೆಯ ವೀರ್ಯ ದಾನಿಯನ್ನು ಹೊಂದಿದ್ದಾರಂತೆ. ದಾನಿಯನ್ನು ಹುಡುಕಲು ಶಾನನ್ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಮೂರು ತಿಂಗಳೊಳಗೆ ಪ್ರಕ್ರಿಯೆಗೆ ಒಳಗಾಗಿದ್ದಾಳೆ. ಕ್ಯಾಲ್ಪೋಲ್ ಸಿರಿಂಜ್ ಬಳಸಿ ಗರ್ಭಧರಿಸಿದ್ದಾಳೆ. ಈ ಯುವತಿ ಸಲಿಂಗಕಾಮಿಯಂತೆ, ಹಾಗಾಗಿ ಗರ್ಭಧಾರಣೆಗಾಗಿ ತಾನು ಸಿರಿಂಜ್ ಬಳಸಿದ್ದೇನೆಂದು ಬಹಿರಂಗಪಡಿಸಿದ್ದಾಳೆ.
ಆದ್ರೆ ಈ ಯುವತಿಯ ಮಾತುಗಳನ್ನು ಜನರು ನಂಬಲಿಲ್ಲ. ತಾನು ಸಿರಿಂಜ್ ಮೂಲಕ ಗರ್ಭಿಣಿಯಾಗಿ ತಾಯ್ತನ ಅನುಭವಿಸಿರುವುದಕ್ಕೆ ತನ್ನ ಮಗಳೇ ಸಾಕ್ಷಿಯೆಂದು ಶಾನನ್ ಹೇಳಿಕೊಂಡಿದ್ದಾಳೆ. ಮಗಳೇ ಇದಕ್ಕೆಲ್ಲ ಪುರಾವೆಯೆಂದು ವಾದಿಸಿದ್ದಾಳೆ. ಜಾಲತಾಣದಲ್ಲಿ ಶಾನನ್ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಗೊಂದಲಕ್ಕೊಳಗಾಗಿದ್ದರೆ, ಅನೇಕರು ಇದು ಅದ್ಭುತ ಕಲ್ಪನೆ ಎಂದು ನಂಬಿದ್ದಾರೆ.