ವೀಕೆಂಡ್ ಕರ್ಫ್ಯೂ ಇದ್ರೂ ಮೆಟ್ರೋ ಸೇವೆ ಜಾರಿ ಇರುತ್ತದೆ ಎಂದು ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲೂ ಮೆಟ್ರೋ ನಿಲ್ಲಿಸಿಲ್ಲ, ಹೀಗಾಗಿ ನಾವು ಮೆಟ್ರೋ ಸೇವೆ ನೀಡ್ತಿವಿ. ವೀಕೆಂಡ್ ನಲ್ಲಿ ಸಂಚಾರದ ಅವಧಿ ಮಾತ್ರ ಬದಲಾವಣೆ ಮಾಡ್ತೀವಿ ಎಂದಿದ್ದಾರೆ.
ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಕಡಿಮೆ ಪ್ರಯಾಣಿಕರು ಇರುತ್ತಾರೆ. ಹೀಗಾಗಿ ಟ್ರೈನ್ ಟ್ರಿಪ್ ಅವಧಿ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ವೀಕೆಂಡ್ ಕರ್ಫ್ಯೂ ವೇಳೆಯೂ ಯಾವುದೇ 50 – 50 ರೂಲ್ ಇರುವುದಿಲ್ಲ. ಈಗಾಗಲೇ ಮೆಟ್ರೋ ಪ್ರಯಾಣಿಕ ಸಂಖ್ಯೆಯೇ ಇಳಿಮುಖವಾಗಿದೆ, ಹೀಗಾಗಿ ಜನರ ನಿಯಂತ್ರಣ ಅವಶ್ಯಕತೆ ಇಲ್ಲ ಎಂದಿರುವ ಪರ್ವೇಜ್, ಸಮಯ ಬದಲಾವಣೆಯ ಹೊರತು ವೀಕೆಂಡ್ ಕರ್ಪ್ಯೂ ವೇಳೆಯೂ ಮೆಟ್ರೋ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಇನ್ನು ಕೆಎಸ್ಆರ್ಟಿಸಿ ಬಸ್ ಗಳ ಸಂಚಾರದಲ್ಲೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ವೀಕೆಂಡ್ ಕರ್ಪ್ಯೂ ವೇಳೆಯು ಕೆಎಸ್ಆರ್ಟಿಸಿ ಬಸ್ ಗಳು ಎಂದಿನಂತೆ ಸಂಚರಿಸಲಿವೆ. ಕೋವಿಡ್ ನಿಯಂತ್ರಿಸಲು ಸರ್ಕಾರ ಹೇರಿರುವ ನಿಯಮಗಳನ್ನ ಪಾಲನೆ ಮಾಡಿ ಸಂಚಾರಕ್ಕೆ ಮುಂದಾಗಿರುವ ಕೆಎಸ್ಆರ್ಟಿಸಿ, ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಲಿದೆ ಎಂದು ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.
ರಾಜ್ಯ ಹಾಗೂ ಹೊರ ರಾಜ್ಯದ ನಡುವೆಯು ಬಸ್ ಸಂಚಾರ ಇರಲಿದೆ. ಆದರೆ ಗೋವಾ, ಕೇರಳ ಹಾಗೂ ಮಹಾರಾಷ್ಟ್ರ, ತಮಿಳುನಾಡಿನ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಎಂದು ಶಿವಯೋಗಿ ತಿಳಿಸಿದ್ದಾರೆ.