ಕೆಲ ತಿಂಗಳುಗಳ ಹಿಂದಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ ಭಾರತದ ಅತಿ ಸಿರಿವಂತ ಹಾಗೂ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅದಾನಿ ಸಮೂಹದ ಗೌತಮ್ ಅದಾನಿ ಅವರ ಆಸ್ತಿಯಲ್ಲಿ ತೀವ್ರ ಇಳಿಕೆಯಾಗಿದೆ.
ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ವರದಿ ಬಿಡುಗಡೆ ಮಾಡಿದ ಬಳಿಕ ಗೌತಮ್ ಅದಾನಿಯವರ ಸಂಪತ್ತಿನಲ್ಲಿ ಬರೋಬ್ಬರಿ 6.64 ಲಕ್ಷ ಕೋಟಿ ರೂಪಾಯಗಳು ಕಡಿಮೆಯಾಗಿದ್ದು, ಹೀಗಾಗಿ ವಿಶ್ವ ಸಿರಿವಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಅವರು ಈಗ 30ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಹಿಂಡನ್ ಬರ್ಗ್ ವರದಿ ಬಿಡುಗಡೆಗೂ ಮುನ್ನ ಗೌತಮ್ ಅದಾನಿ 9.96 ಲಕ್ಷ ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದ್ದು, ಈಗ 3.32 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ. ಇನ್ನು 6.78 ಲಕ್ಷ ಕೋಟಿ ರೂಪಾಯಿಗಳ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ವಿಶ್ವ ಸಿರಿವಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.