ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ತನಿಖಾ ವರದಿ ಬಳಿಕ ಅದಾನಿ ಸಮೂಹ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಂಪನಿ ಷೇರುಗಳ ಬೆಲೆಯಲ್ಲಿ ಕುಸಿತ ಕಾಣುತ್ತಿದ್ದು, ಇದರ ಪರಿಣಾಮ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಈಗ 15 ನೇ ಸ್ಥಾನಕ್ಕೆ ಜಾರಿದ್ದಾರೆ.
ಅದಾನಿ ಸಮೂಹಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಸಾಲ ನೀಡಲು ಖಾಸಗಿ ಬ್ಯಾಂಕುಗಳು ನಿರಾಕರಿಸುತ್ತಿವೆ ಎನ್ನಲಾಗಿದೆ. ಅಡಮಾನಕ್ಕಾಗಿ ಅದಾನಿ ಕಂಪನಿ ನೀಡಲು ಮುಂದಾದ ಬಾಂಡುಗಳನ್ನು ಸ್ವೀಕರಿಸಲು ಈ ಬ್ಯಾಂಕುಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ ಷೇರುಗಳ ಮೌಲ್ಯ ಮತ್ತಷ್ಟು ಪಾತಾಳಕ್ಕೆ ಕುಸಿಯುತ್ತಿದೆ.
ಇದರ ಮಧ್ಯೆ ಈ ಮೊದಲು ಭಾರತದ ಹಾಗೂ ಏಷ್ಯಾದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಗೌತಮ್ ಅದಾನಿ ಸಂಪತ್ತಿನಲ್ಲಿ ಇಳಿಕೆಯಾದ ಕಾರಣ ಮತ್ತೆ ಆ ಸ್ಥಾನಕ್ಕೆ ಮರಳಿದ್ದಾರೆ.