ಆಗಸ್ಟ್ 13 ಶನಿವಾರ, ಆಗಸ್ಟ್ 14 ಭಾನುವಾರ ವಾರಾಂತ್ಯದ ರಜಾ ದಿನಗಳಾಗಿದ್ದು, ಇದರ ಜೊತೆಗೆ ಆಗಸ್ಟ್ 15ರ ಸೋಮವಾರ ಸ್ವಾತಂತ್ರ್ಯೋತ್ಸವದ ಕಾರಣಕ್ಕೆ ಶಾಲಾ – ಕಾಲೇಜು, ಕಾರ್ಖಾನೆ, ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು.
ಹೀಗಾಗಿ ಪ್ರವಾಸಿ ಸ್ಥಳಗಳಿಗೆ ಜನ ಸಾಗರೋಪಾದಿಯಲ್ಲಿ ಆಗಮಿಸಿದ್ದು, ಎಡೆಬಿಡದೆ ಸುರಿಯುತ್ತಿದ್ದ ಮಳೆ ಕೂಡ ನಿಂತಿದ್ದ ಕಾರಣ ವಾತಾವರಣ ಪೂರಕವಾಗಿತ್ತು. ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಶನಿವಾರ ಹಾಗೂ ಭಾನುವಾರ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.
ಈ ಎರಡು ದಿನಗಳ ಅವಧಿಯಲ್ಲಿ 18,000ಕ್ಕೂ ಅಧಿಕ ಪ್ರವಾಸಿಗರು ಜೋಗ ಜಲಪಾತ ವೀಕ್ಷಣೆಗೆ ಆಗಮಿಸಿದ್ದರು ಎಂದು ಹೇಳಲಾಗಿದ್ದು, ಜಲಪಾತದ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದ ಕಾರಣ ವ್ಯಾಪಾರ ವಹಿವಾಟು ಕೂಡ ಜೋರಾಗಿತ್ತು.