
ಜೌಮೌ ಸೂಪ್ ಹೈಟಿಯ ಸ್ವಾತಂತ್ರ್ಯದ ವೀರರು ಮತ್ತು ನಾಯಕಿಯರ ಕಥೆಯನ್ನು ಹೇಳುತ್ತದೆ. ದಂಗೆಕೋರ ಕಪ್ಪು ಗುಲಾಮರು (ಜನಾಂಗ) ರಚಿಸಿದ ಮೊದಲ ರಾಷ್ಟ್ರವಾಗಿ ಜನವರಿ 1, 1804ರಂದು, ಹೈಟಿ ಸ್ವಾತಂತ್ರ್ಯ ಪಡೆಯುವವರೆಗೂ ಸ್ಕ್ವ್ಯಾಷ್-ಆಧಾರಿತ ಸೂಪ್ ಗುಲಾಮರಿಗೆ ದೀರ್ಘಕಾಲದವರೆಗೆ ನಿಷೇಧಿಸಲ್ಪಟ್ಟಿತ್ತು.
ಅವರು ಅಂತಿಮವಾಗಿ ಸೂಪ್ ಅನ್ನು ಸೇವಿಸುವ ಮೂಲಕ ತಮ್ಮ ಸ್ವಾತಂತ್ರ್ಯವನ್ನು ಆಚರಿಸಿದ್ದರು. ಅಲ್ಲದೆ ಹೈಟಿ ದೇಶದ ಜನರು ಸಾಂಪ್ರದಾಯಿಕವಾಗಿ ಹೊಸ ವರ್ಷದ ದಿನದಂದು ಗುಲಾಮಗಿರಿಯಿಂದ ವಿಮೋಚನೆಯ ವಾರ್ಷಿಕೋತ್ಸವವನ್ನು ಸ್ಮರಿಸುತ್ತಾರೆ.
ಇತರ ಕೆರಿಬಿಯನ್ ಸಂಪ್ರದಾಯಗಳಲ್ಲಿ ಜಮೈಕಾದ ರೆಗ್ಗೀ ಸಂಗೀತವನ್ನು 2018 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ.