ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಈ ಮೈಲಿಗಲ್ಲು ಸಾಧಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ 42ನೇ ರನ್ ಪೂರೈಸುತ್ತಿದ್ದಂತೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4000 ರನ್ ಗಳಿಸಿದ್ರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 50 ರನ್ ಗಳಿಸಿದ್ದಾರೆ. ಇದರೊಂದಿಗೆ ಟಿ20ಯಲ್ಲಿ ಒಟ್ಟಾರೆ 4008 ರನ್ ಕಲೆಹಾಕಿದಂತಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಒಂದು ಶತಕ ಮತ್ತು 37 ಅರ್ಧಶತಕಗಳನ್ನು ಕೊಹ್ಲಿ ಬಾರಿಸಿರದ್ದಾರೆ. ಈವರೆಗೆ 115 ಟಿ20 ಪಂದ್ಯಗಳನ್ನಾಡಿ 52.73ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ
1. ವಿರಾಟ್ ಕೊಹ್ಲಿ (ಭಾರತ) – 115 ಪಂದ್ಯಗಳು, 4008 ರನ್
2. ರೋಹಿತ್ ಶರ್ಮಾ (ಭಾರತ) – 148 ಪಂದ್ಯಗಳು, 3853 ರನ್
3. ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್) – 122 ಪಂದ್ಯಗಳು, 3531 ರನ್
4. ಬಾಬರ್ ಅಜಮ್ (ಪಾಕಿಸ್ತಾನ) – 98 ಪಂದ್ಯಗಳು, 3323 ರನ್
5. ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್) – 121 ಪಂದ್ಯಗಳು, 3181 ರನ್
ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು
1. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) – 463 ಪಂದ್ಯಗಳಲ್ಲಿ 14,562 ರನ್
2. ಕೀರಾನ್ ಪೊಲಾರ್ಡ್ (ವೆಸ್ಟ್ ಇಂಡೀಸ್) – 614 ಪಂದ್ಯಗಳಲ್ಲಿ 11,915 ರನ್
3. ಶೋಯೆಬ್ ಮಲಿಕ್ (ಪಾಕಿಸ್ತಾನ) – 481 ಪಂದ್ಯಗಳಲ್ಲಿ 11,902 ರನ್
4. ವಿರಾಟ್ ಕೊಹ್ಲಿ (ಭಾರತ) – 359 ಪಂದ್ಯಗಳಲ್ಲಿ 11,276 ರನ್
5. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) – 336 ಪಂದ್ಯಗಳಲ್ಲಿ 11,080 ರನ್