ಪ್ಯಾರಿಸ್: ವಿಶ್ವದ ಮೊದಲ ಎಸ್ಎಂಎಸ್ ಮೇರಿ ಕ್ರಿಸ್ಮಸ್ ಅನ್ನು ಪ್ಯಾರಿಸ್‌ನಲ್ಲಿ ನಡೆದ ಹರಾಜಿನಲ್ಲಿ 107,000 ಯುರೋಗಳಿಗೆ (ರೂ. 91.35 ಲಕ್ಷ) ಮಾರಾಟವಾಗಿದೆ. ಡಿಸೆಂಬರ್ 3, 1992 ರಂದು ಕಳುಹಿಸಲಾದ ಮೇರಿ ಕ್ರಿಸ್ಮಸ್ ಸಂದೇಶವು ಅತ್ಯಧಿಕ ಮೊತ್ತಕ್ಕೆ ಹರಾಜಾಗಿದೆ.
ಈ ಸಂದೇಶವನ್ನು ಬ್ರಿಟಿಷ್ ಟೆಲಿಕಾಂ ಕಂಪನಿ ವೊಡಾಫೋನ್ ಹರಾಜಿಗೆ ಹಾಕಿದೆ. ಇದನ್ನು ವೊಡಾಫೋನ್ ಇಂಜಿನಿಯರ್ ನೀಲ್ ಪ್ಯಾಪ್‌ವರ್ತ್ ಅವರು ಯುಕೆಯಲ್ಲಿರುವ ಮ್ಯಾನೇಜರ್‌ಗೆ ಕಳುಹಿಸಿದ್ದಾರೆ. ಎಸ್ಎಂಎಸ್ ಅನ್ನು 2 ಕಿಲೋಗ್ರಾಂ ಆರ್ಬಿಟೆಲ್ ಟೆಲಿಫೋನ್‌ನಲ್ಲಿ ಸ್ವೀಕರಿಸಲಾಗಿದೆ. ಇದು ಡೆಸ್ಕ್ ಫೋನ್‌ಗೆ ಹೋಲುತ್ತದೆ. ಆದರೆ, ಕಾರ್ಡ್‌ಲೆಸ್ ಮತ್ತು ಹ್ಯಾಂಡಲ್ ಹೊಂದಿದೆ.
ಮೊದಲ ಎಸ್ಎಂಎಸ್ ನ ಖರೀದಿದಾರರು ಸಂದೇಶವನ್ನು ರವಾನಿಸಿದ ಮೂಲ ಸಂವಹನ ಪ್ರೋಟೋಕಾಲ್‌ನ ಪ್ರತಿಕೃತಿಯನ್ನು ಸ್ವೀಕರಿಸುತ್ತಾರೆ. ವೊಡಾಫೋನ್ ಗ್ರೂಪ್ ಸಿಇಓ, ನಿಕ್ ರೀಡ್ ಸಹಿ ಮಾಡಿದ ಸಂದೇಶದ ದೃಢೀಕರಣವನ್ನು ಖಾತರಿಪಡಿಸುವ ಪ್ರಮಾಣಪತ್ರವನ್ನು ಖರೀದಿದಾರರಿಗೆ ನೀಡಲಾಗುತ್ತದೆ.
ಸಂದೇಶವನ್ನು ಡಿಸೆಂಬರ್ 3, 1992 ರಂದು ಆರ್ಬಿಟೆಲ್ 901 ಹ್ಯಾಂಡ್‌ಸೆಟ್‌ಗೆ ಯಶಸ್ವಿಯಾಗಿ ಕಳುಹಿಸಲಾಯಿತು. ಮೊದಲ ಸಂದೇಶವನ್ನು ಕಳುಹಿಸಿದ ನಂತರ, ಮೊಬೈಲ್ ಫೋನ್ ತಯಾರಕರು ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ವೈಶಿಷ್ಟ್ಯವನ್ನು ತರಲು ಪ್ರಾರಂಭಿಸಿದರು. ಈ ಸಾಲಿನಲ್ಲಿ ನೋಕಿಯಾ ಕಂಪನಿ ಮೊದಲ ಸ್ಥಾನದಲ್ಲಿದೆ.