ನೇಪಾಳದ ಕಾಂಚನಜುಂಗಾ ಪರ್ವತವನ್ನು ಏರುವ ಸಂದರ್ಭದಲ್ಲಿ ಭಾರತೀಯ ಪರ್ವತಾರೋಹಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಮಹಾರಾಷ್ಟ್ರ ಮೂಲದ ನಾರಾಯಣನ್ ಅಯ್ಯರ್ ಅವರು ಗುರುವಾರ ವಿಶ್ವದ ಮೂರನೇ ಅತಿ ಎತ್ತರದ ಶಿಖರದ ತುದಿಗೆ ತೆರಳುತ್ತಿದ್ದಾಗ ಮೃತಪಟ್ಟಿದ್ದಾರೆ. ಅವರು 8,200 ಮೀಟರ್ ಎತ್ತರದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪಯೋನೀರ್ ಅಡ್ವೆಂಚರ್‌ನ ಅಧ್ಯಕ್ಷ ಪಸಾಂಗ್ ಶೆರ್ಪಾ ಉಲ್ಲೇಖಿಸಿದ್ದಾರೆ.
52 ವರ್ಷದ ಆರೋಹಿ ಆರೋಹಣವನ್ನು ಕೊನೆಗೊಳಿಸುವಾಗ ಅನಾರೋಗ್ಯಕ್ಕೆ ಒಳಗಾದ ನಂತರವೂ ಇಳಿಯಲು ನಿರಾಕರಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಶೆರ್ಪಾ ಹೇಳಿದ್ದಾರೆ.
ಅಯ್ಯರ್ ಅವರ ಕ್ಲೈಂಬಿಂಗ್ ಗೈಡ್ ಅವರನ್ನು ಕೆಳಗಿಳಿಯುವಂತೆ ಪದೇ ಪದೇ ಕೇಳಿಕೊಂಡ್ರು ಅವರು ನಿರಾಕರಿಸಿದ್ದಾಗಿ ಶೆರ್ಪಾ ಹೇಳಿದ್ದಾರೆ. ಪರ್ವತವನ್ನು ಏರಿದ ಇತರ ಆರೋಹಿಗಳು ಈಗ ಬೇಸ್ ಕ್ಯಾಂಪ್‌ಗೆ ಇಳಿಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.