ಫ್ಯಾಷನ್ ಅನ್ನೋದು ನಿತ್ಯ ಬದಲಾಗೋ ಅದ್ಭುತ ಪ್ರಕ್ರಿಯೆ. ನಿನ್ನೆಯ ಫ್ಯಾಷನ್ ಇವತ್ತಿಗೆ ಹಳತು, ಮೊನ್ನೆಯ ಫ್ಯಾಷನ್ ಇವತ್ತಿಗೆ ಇನ್ನೊಂದು ರೂಪದಲ್ಲಿ ಹೊಸತು. ಅದರಲ್ಲೂ ದೇಶ ವಿದೇಶದ ಸ್ಟೈಲ್, ಕಲರ್, ಸ್ಟೋನ್ಗಳಂತೂ ಬಹು ಕಾಲ ಟ್ರೆಂಡ್ನಲ್ಲಿರುತ್ತವೆ. ಈ ನಿಟ್ಟಿನಲ್ಲಿ ಸದ್ಯ ಟ್ರೆಂಡ್ನಲ್ಲಿದೆ ಇಟಾಲಿಯನ್ ಜ್ಯುವೆಲ್ಲರಿಗಳು. ಅದರಲ್ಲೂ ಮುಖ್ಯವಾಗಿ ಕಿವಿಯೋಲೆ ಮತ್ತು ಚೈನ್ ಎಲ್ಲರ ಗಮನ ಸೆಳೆಯುತ್ತವೆ.
ಆಫೀಸ್, ಕಾಲೇಜು, ಫಾರ್ಮಲ್ಸ್, ಜೀನ್ಸ್, ಕುರ್ತಿಗೆ ಹೊಂದಿಕೆಯಾಗುವ ಈ ಇಟಾಲಿಯನ್ ಕಿವಿಯೋಲೆಗಳಿಗೆ ಭಾರೀ ಬೇಡಿಕೆ ಇದೆ. ಕ್ರಿಸ್ಟಲ್, ವೆಡ್ಲಾಕ್ ಟ್ರಯಂಗಲ್ ಸ್ಟಡ್ಸ್, ಸ್ಕೈ ಲಾಫ್ಸ್ ಡ್ರಾಪ್ಸ್, ಜಿಯೋ ಮಿಟ್ರಿಕ್ ಪ್ಯಾಟರ್ನ್, ಗೋಲ್ಡ್, ಕಾಫರ್ ಮತ್ತು ಪ್ಲಾಟಿನಮ್ ವಿನ್ಯಾಸ ಸೇರಿದಂತೆ ಸಟಲ್ ಕಲರ್ಗಳಲ್ಲೂ ಕಣ್ಮನ ಸೆಳೆಯುತ್ತದೆ.
ಇಟಲಿ ಚಿನ್ನದ ಆಭರಣದ ವಿಷಯದಲ್ಲಿ ದೊಡ್ಡ ಸ್ಥಾನದಲ್ಲಿದೆ. ಸಣ್ಣ ಎಳೆಯ ಚೈನ್ಗಳು ಇಟಾಲಿಯನ್ ಸ್ಟೈಲ್ ಸ್ಟೇಟ್ಮೆಂಟ್ಗಳಾಗಿವೆ. ವಿಶ್ವದ ಅನೇಕ ಮಹಿಳೆಯರು ಇಟಾಲಿಯನ್ ಕಿಚನ್ಗಷ್ಟೇ ಅಲ್ಲದೇ ಅಲ್ಲಿನ ಆಭರಣ ವಿನ್ಯಾಸಗಳಿಗೂ ಪ್ರಾಮುಖ್ಯತೆ ನೀಡುತ್ತಾರೆ. ಬಾಲಿವುಡ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇಟಾಲಿಯನ್ ಆಭರಣಗಳಿಗೆ ಮನಸೋತಿದ್ದಾರೆ.
ನೀವು ಆಭರಣ ಪ್ರಿಯರಲ್ಲದಿದ್ದರೆ, ಆದ್ರೂ ಜ್ಯುವೆಲ್ಲರಿ ಧರಿಸಲೇಬೇಕು ಎನ್ನುವ ಸಂದರ್ಭದಲ್ಲಿ ಇಟಾಲಿಯನ್ ಡಿಸೈನ್ಸ್ ಮೊರೆ ಹೋಗಬಹುದು. ಅದ್ದೂರಿತನವಿಲ್ಲದೇ ಬಹಳ ಸರಳವಾಗಿ ಈ ಆಭರಣಗಳು ವಿನ್ಯಾಸವಾಗಿರುತ್ತವೆ. ಸಟಲ್ ಡಿಸೈನ್ಸ್, ಹೆಚ್ಚು ಕಟ್ಸ್ ಇರದ ಆಕರ್ಷಕ ಡಿಸೈನ್ಸ್ಗಳು ನಿಮ್ಮನ್ನು ಆಭರಣ ಪ್ರಿಯರನ್ನಾಗಿಸುತ್ತವೆ.