ಸೂರ್ಯ ನಗರಿ ಜೋಧ್ಪುರಕ್ಕೆ ವಿಶ್ವದ ಅತ್ಯಂತ ಆಕರ್ಷಕ ತಾಣಗಳಲ್ಲಿ 10 ನೇ ಸ್ಥಾನ. ಏಷ್ಯಾದಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣಗಳಲ್ಲಿ ಜೋಧ್ಪುರ ಮೂರನೆಯದು.
ರಾಜಸ್ತಾನದ ಎರಡನೇ ಅತಿ ದೊಡ್ಡ ನಗರ ಎನಿಸಿಕೊಂಡಿರುವ ಜೋಧ್ಪುರಕ್ಕೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸ್ತಾರೆ. ಸೂರ್ಯ ನಗರಿಯ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಭವ್ಯವಾದ ಕೋಟೆಗಳು, ಅರಮನೆಗಳು ಮತ್ತು ಐತಿಹಾಸಿಕ ಕುರುಹುಗಳು ಜೋಧ್ಪುರದ ಅಂದಕ್ಕೆ ಕಳಶವಿಟ್ಟಂತಿವೆ. ಐದನೇ ಬಾರಿಗೆ ಜೋಧ್ಪುರ ಈ ಗೌರವಕ್ಕೆ ಭಾಜನವಾಗಿದೆ. ಮೆಕ್ಸಿಕೋದ ಸ್ಯಾನ್ ಜೋಸ್ ಡೆಲ್ ಕಾಬೋ ವಿಶ್ವದ ಆಕರ್ಷಕ ಸ್ಥಳಗಳಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.
ಪಿಲಿಫೈನ್ಸ್ ನ ಎಲ್ ನಿಡೋ ಎರಡನೇ ಸ್ಥಾನದಲ್ಲಿದ್ರೆ, ವಿಯೆಟ್ನಾಂನ ದಾ ಲತ್ ನಾಲ್ಕನೇ ಸ್ಥಾನ ಪಡೆದಿದೆ. ದಕ್ಷಿಣ ಕೊರಿಯಾದ ಜೆಜು, ವಿಯೆಟ್ನಾಂನ ಸಾಪಾ, ತೈವಾನ್ ನ ಹೌಲಿನ್, ಕುಚಿಂಗ್, ಕೋಟಾ ಕಿನಬಲು ಹಾಗೂ ಮಲೇಷಿಯಾದ ಜಾರ್ಜ್ ಟೌನ್ ನಂತರದ ಸ್ಥಾನ ಪಡೆದುಕೊಂಡಿವೆ.