ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಕ್ರಿಕೆಟ್ ಜನಪ್ರಿಯ ಆಟವಾಗಿ ಗುರುತಿಸಿಕೊಂಡಿದೆ. ಕ್ರಿಕೆಟಿಗರಿಗಂತೂ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕೇವಲ ಪುರುಷರ ಕ್ರಿಕೆಟ್ ತಂಡ ಮಾತ್ರವಲ್ಲ, ಮಹಿಳೆಯರ ಕ್ರಿಕೆಟ್ ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಅದಕ್ಕೆ ತಕ್ಕಂತೆ ಮಹಿಳಾ ಆಟಗಾರ್ತಿಯರಿಗೂ ಮನ್ನಣೆ ದೊರೆಯುತ್ತಿದೆ. ಆಟಗಾರ್ತಿಯರು ಹೆಸರಿನ ಜೊತೆಗೆ ಅಪಾರ ಸಂಪತ್ತನ್ನು ಹೊಂದಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಕ್ರಿಕೆಟಿಗರು ಯಾರು? ಅವರಲ್ಲಿ ಎಷ್ಟು ಭಾರತೀಯರಿದ್ದಾರೆ ಅನ್ನೋದನ್ನು ನೋಡೋಣ.
ವಿಶ್ವದ ಶ್ರೀಮಂತ ಮಹಿಳಾ ಕ್ರಿಕೆಟಿಗರಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿ ಎಲ್ಲಿಸ್ ಪೆರ್ರಿ ಹೆಸರು ಮೊದಲ ಸ್ಥಾನದಲ್ಲಿದೆ. ಎಲ್ಲಿಸ್‌ರ ಒಟ್ಟಾರೆ ಆಸ್ತಿಯ ಮೌಲ್ಯ 15 ಮಿಲಿಯನ್ ಡಾಲರ್. ವಾರ್ಷಿಕವಾಗಿ ಈಕೆ 0.13 ಡಾಲರ್‌ನಷ್ಟು ಗಳಿಸುತ್ತಾರೆ.
ಎರಡನೇ ಶ್ರೀಮಂತ ಮಹಿಳಾ ಆಟಗಾರ್ತಿ ಆಸ್ಟ್ರೇಲಿಯಾದ ಮೆಗ್ ಲ್ಯಾನಿನ್. ಈಕೆಯ ಬಳಿ ಕೂಡ ಅಪಾರ ಸಂಪತ್ತಿದೆ. ಮೆಗ್ ಲ್ಯಾನಿನ್‌ರ ಒಟ್ಟಾರೆ ಆಸ್ತಿ ಮೌಲ್ಯ 9 ಮಿಲಿಯನ್ ಡಾಲರ್. ವಾರ್ಷಿಕ ಗಳಿಕೆ 0.13 ಮಿಲಿಯನ್ ಡಾಲರ್‌ನಷ್ಟಿದೆ.
ಭಾರತದ ಡ್ಯಾಶಿಂಗ್ ಆಟಗಾರ್ತಿ ಸ್ಮೃತಿ ಮಂದಣ್ಣ ಸಹ ಕೋಟ್ಯಾಧೀಶೆ. ಇವರ ಒಟ್ಟಾರೆ ಆಸ್ತಿಯ ಮೌಲ್ಯ ಸುಮಾರು 4 ಮಿಲಿಯನ್ ಡಾಲರ್. ಇವರ ವಾರ್ಷಿಕ ಗಳಿಕೆ ಸುಮಾರು 50 ಲಕ್ಷ ರೂಪಾಯಿ ಇದೆ.
ನಂತರದ ಸ್ಥಾನದಲ್ಲಿದ್ದಾರೆ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್. ಇವರ ಬಳಿ ಸುಮಾರು 3 ಮಿಲಿಯನ್ ಡಾಲರ್‌ನಷ್ಟು ಆಸ್ತಿಯಿದೆ. ಹರ್ಮನ್‌ಪ್ರೀತ್‌ರ ವಾರ್ಷಿಕ ವೇತನ BCCI ಒಪ್ಪಂದದ ಪ್ರಕಾರ 50 ಲಕ್ಷ ರೂಪಾಯಿ. ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಸಾರಾ ಟೇಲರ್ ಕೂಡ ಶ್ರೀಮಂತ ಆಟಗಾರ್ತಿಯಲ್ಲೊಬ್ಬರು. ಇವರ ಒಟ್ಟು ಆಸ್ತಿ 2 ಮಿಲಯನ್ ಡಾಲರ್.