alex Certify ವಿಶ್ವದ ಅತ್ಯಂತ ದುಬಾರಿ ಮಾವಿನಹಣ್ಣು ಈಗ ಕೊಪ್ಪಳದಲ್ಲೂ ಲಭ್ಯ; ಕೆ.ಜಿ. ಗೆ 2.5 ಲಕ್ಷ ರೂ. ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ದುಬಾರಿ ಮಾವಿನಹಣ್ಣು ಈಗ ಕೊಪ್ಪಳದಲ್ಲೂ ಲಭ್ಯ; ಕೆ.ಜಿ. ಗೆ 2.5 ಲಕ್ಷ ರೂ. ಬೆಲೆ…!

ವಿಶ್ವದ ಅತ್ಯಂತ ದುಬಾರಿ ಮಾವಿನಹಣ್ಣು ಎಂಬ ಹೆಗ್ಗಳಿಕೆ ಜಪಾನ್ ಮೂಲದ ‘ಮಿಯಾಜಾಕಿ’ ತಳಿ ಹೊಂದಿದೆ. ಕೆ.ಜಿ. ಗೆ 2.50 ಲಕ್ಷ ರೂಪಾಯಿ ಬೆಲೆ ಬಾಳುವ ಈ ಮಾವಿನ ಹಣ್ಣನ್ನು ಈವರೆಗೆ ಭಾರತದ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಬೆಳೆಯಲಾಗಿತ್ತು.

ಇದೀಗ ಕರ್ನಾಟಕದ ವಿಜಯಪುರ ಜಿಲ್ಲೆಯ ಅಷ್ಪಾಕ್ ಪಾಟೀಲ್ ಎಂಬ ಯುವಕ ತಮ್ಮ ಮನೆಯ ಕೈತೋಟದಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಮಿಯಾಜಾಕಿಯನ್ನು ಬೆಳೆದಿದ್ದು, ಅದನ್ನು ಕೊಪ್ಪಳದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಅಷ್ಪಾಕ್ ಪಾಟೀಲ್ ಬೆಳೆದ ಮಿಯಾಜಾಕಿ ಗಿಡದಲ್ಲಿ 14 ಹಣ್ಣುಗಳು ಬಿಟ್ಟಿದ್ದು, ದೊಡ್ಡ ಲಾಭ ಬರುವ ನಿರೀಕ್ಷೆಯಲ್ಲಿ ಅವರಿದ್ದಾರೆ. ಇನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತರ್ಲಕಟ್ಟಿ ಗ್ರಾಮದ ರಂಗನಾಥ ಎಂಬವರು ಸಹ ಎಂಟು ತಿಂಗಳ ಹಿಂದೆ ಒಂದು ಸಸಿಗೆ ತಲಾ 2,500 ರೂ. ಗಳಂತೆ ಒಟ್ಟು 600 ಸಸಿಗಳನ್ನು ನಾಟಿ ಮಾಡಿದ್ದು, ಮುಂದಿನ ದಿನದಲ್ಲಿ ಉತ್ತಮ ಫಸಲಿನ ಜೊತೆಗೆ ಲಾಭ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...