ಪ್ಯಾರಿಸ್: ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಅವರು 2015ರಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆ ಎಂದು ಕರೆಯಲ್ಪಡುವ ಅದ್ಧೂರಿ ಚಾಟೋವನ್ನು ಖರೀದಿಸಿದ್ದರು. ಇದೀಗ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಲು ಫ್ರಾನ್ಸ್‌ಗೆ ತೆರಳಿರುವ ಅವರು ಇದೀಗ ತಮ್ಮ ದುಬಾರಿ ಬಂಗಲೆಯಲ್ಲಿ ತಂಗಿದ್ದಾರೆ.
ಪ್ಯಾರಿಸ್‌ನ ಹೊರಗಿನ ಲೌವೆಸಿನ್ನೆಸ್‌ನಲ್ಲಿರುವ ಚಟೌ ಲೂಯಿಸ್ XIV ಒಂದು ಹೊಸ-ನಿರ್ಮಾಣ ಮಹಲಾಗಿದ್ದು, ಫ್ರೆಂಚ್ ರಾಜಮನೆತನದ ಸ್ಥಾನವಾಗಿದ್ದ ಹತ್ತಿರದ ವರ್ಸೈಲ್ಸ್ ಅರಮನೆಯ ಅತಿರಂಜಿತ ಐಷಾರಾಮಿಗಳನ್ನು ಅನುಕರಿಸಲಾಗಿದೆ.
7,000 ಚದರ ಮೀಟರ್ ಆಸ್ತಿಯನ್ನು 2015ರಲ್ಲಿ ಬಹಿರಂಗಪಡಿಸದ ಖರೀದಿದಾರರು 275 ಮಿಲಿಯನ್ ಯುರೋಗಳಿಗೆ (ಆ ಸಮಯದಲ್ಲಿ ಡಾಲರ್ 300 ಮಿಲಿಯನ್) ಖರೀದಿಸಿದ್ರು. ಫಾರ್ಚೂನ್ ನಿಯತಕಾಲಿಕವು ಇದನ್ನು “ವಿಶ್ವದ ಅತ್ಯಂತ ದುಬಾರಿ ಮನೆ” ಎಂದು ಕರೆದಿದೆ.
ಬಂಗಲೆಯ ಪ್ರವೇಶ ದ್ವಾರವನ್ನು ಅಪಾರ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದು, ಅರ್ಧ ಡಜನ್ ವಾಹನಗಳು ಸೇರಿದಂತೆ ಪೊಲೀಸರ ದೊಡ್ಡ ಸಂಖ್ಯೆಯೇ ನೆರೆದಿದೆ. ನಾಲ್ಕು ವರ್ಷಗಳ ನಂತರ ಮತ್ತೆ ಸೌದಿ ರಾಜಕುಮಾರ ಪಾಶ್ಚಿಮಾತ್ಯ ರಾಷ್ಟ್ರದತ್ತ ಮುಖ ಮಾಡಿರುವುದು ಅಚ್ಚರಿ ತಂದಿದೆ.
ಅಂದಹಾಗೆ, ಭವ್ಯ ಚಾಟೋವು ನೈಟ್ ಕ್ಲಬ್, ಕಾರಂಜಿ, ಚಿತ್ರಮಂದಿರ, ದೈತ್ಯ ಅಕ್ವೇರಿಯಂ ಅನ್ನು ಹೋಲುವ ಕಂದಕದಲ್ಲಿ ನೀರೊಳಗಿನ ಗಾಜಿನ ಕೋಣೆಯನ್ನು ಸಹ ಒಳಗೊಂಡಿದೆ. ಇನ್ನು ಸೌದಿ ಅರೇಬಿಯಾದಲ್ಲಿ ಆಲ್ಕೋಹಾಲ್ ಅನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದರೂ, ಎಮಾದ್ ಖಶೋಗಿಯ ಕಂಪನಿ ಕೊಗೆಮಾಡ್‌ನ ವೆಬ್‌ಸೈಟ್‌ನಲ್ಲಿನ ಫೋಟೋಗಳು ವೈನ್ ಸೆಲ್ಲಾರ್ ಅನ್ನು ಸಹ ತೋರಿಸುತ್ತವೆ.
ಕಿಂಗ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರ ಮಗ 2015 ರಲ್ಲಿ 500 ಮಿಲಿಯನ್ ಡಾಲರ್ ವಿಹಾರ ನೌಕೆಯನ್ನು ಖರೀದಿಸಿದ್ದಾರೆ. 2017 ರಲ್ಲಿ 450 ಮಿಲಿಯನ್ ಡಾಲರ್ ಗೆ ಲಿಯೊನಾರ್ಡೊ ಡಾ ವಿನ್ಸಿ ಪೇಂಟಿಂಗ್‌ನ್ನು ನಿಗೂಢವಾಗಿ ಖರೀದಿಸಿದ್ದಾರೆ ಎಂದು ವರದಿಯಾಗಿದೆ.