alex Certify ವಿಶ್ವದ ಅತ್ಯಂತ ದುಬಾರಿ ನಗರಗಳಿವು…! ಇಲ್ಲಿದೆ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ದುಬಾರಿ ನಗರಗಳಿವು…! ಇಲ್ಲಿದೆ ಸಂಪೂರ್ಣ ಪಟ್ಟಿ

ಅಮೆರಿಕ ಹಾಗೂ ಸಿಂಗಾಪುರಕ್ಕೆ ಒಮ್ಮೆಯಾದ್ರೂ ಹೋಗಬೇಕು ಅನ್ನೋ ಆಸೆ ಬಹಳಷ್ಟು ಜನರಿಗಿರಬಹದು. ಆದ್ರೀಗ ಹೊಸ ಸಮೀಕ್ಷೆಯೊಂದರಲ್ಲಿ ನ್ಯೂಯಾರ್ಕ್‌ ಹಾಗೂ ಸಿಂಗಾಪುರ ವಾಸಿಸಲು ಅತ್ಯಂತ ದುಬಾರಿ ನಗರಗಳು ಅನ್ನೋದು ಬಹಿರಂಗವಾಗಿದೆ.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ನ ವರ್ಲ್ಡ್‌ವೈಡ್ ಕಾಸ್ಟ್ ಆಫ್ ಲಿವಿಂಗ್ ವರದಿಯ ಪ್ರಕಾರ, ವಿಶ್ವದ 172 ಪ್ರಮುಖ ನಗರಗಳಲ್ಲಿನ ಜೀವನ ವೆಚ್ಚವು ಕಳೆದ ವರ್ಷದಲ್ಲಿ ಸರಾಸರಿ ಶೇ.8.1ರಷ್ಟಿದೆ. ಇದಕ್ಕೆ ಕಾರಣ ಉಕ್ರೇನ್‌-ರಷ್ಯಾ ಯುದ್ಧ ಎನ್ನಲಾಗ್ತಿದೆ.

ಕಳೆದ ವರ್ಷ ವಾಸಕ್ಕೆ ಅತ್ಯಂತ ದುಬಾರಿ ಎನಿಸಿಕೊಂಡಿದ್ದ  ಟೆಲ್ ಅವಿವ್ ಮೂರನೇ ಸ್ಥಾನದಲ್ಲಿದೆ, ಹಾಂಗ್ ಕಾಂಗ್ ಮತ್ತು ಲಾಸ್ ಏಂಜಲೀಸ್ ಐದನೇ ಸ್ಥಾನದಲ್ಲಿವೆ. ಆದರೆ ಏಷ್ಯಾದ ನಗರಗಳಲ್ಲಿ ಅಷ್ಟಾಗಿ ಬೆಲೆ ಏರಿಕೆಯ ಬಿಸಿಯಿಲ್ಲ. ಸರಾಸರಿ ಜೀವನ ವೆಚ್ಚದಲ್ಲಿ ಶೇ.4.5ರಷ್ಟು ಹೆಚ್ಚಳವಾಗಿದೆ.  ಆದಾಗ್ಯೂ ಸರ್ಕಾರದ ನೀತಿಗಳು ಮತ್ತು ಕರೆನ್ಸಿಯ ಚಲನೆಗಳಿಂದಾಗಿ ದೇಶದ ಕಾರ್ಯಕ್ಷಮತೆ ಬದಲಾಗಿದೆ.

* ಟೋಕಿಯೊ ಮತ್ತು ಒಸಾಕಾ ಕ್ರಮವಾಗಿ 24 ಮತ್ತು 33ನೇ ಸ್ಥಾನಗಳನ್ನು ಕಳೆದುಕೊಂಡು ಕೆಳಕ್ಕೆ ಇಳಿದಿವೆ. ಇದಕ್ಕೆ ಕಾರಣ ಬಡ್ಡಿದರಗಳು ಕಡಿಮೆಯಾಗಿರೋದು.

* ಸಿರಿಯಾದ ರಾಜಧಾನಿ ಡಮಾಸ್ಕಸ್ ಮತ್ತು ಲಿಬಿಯಾದ ಟ್ರಿಪೋಲಿ ವಿಶ್ವದ ಅತ್ಯಂತ ಅಗ್ಗದ ಸ್ಥಳಗಳಾಗಿವೆ.

* ಬಲವಾದ ರಫ್ತಿನ ಕಾರಣಕ್ಕೆ ಸಿಡ್ನಿ ಅಗ್ರ 10 ರೊಳಗೆ ಜಿಗಿದಿದೆ.

* ಕಳೆದ ವರ್ಷ 24ನೇ ಸ್ಥಾನದಲ್ಲಿದ್ದ ಸ್ಯಾನ್ ಫ್ರಾನ್ಸಿಸ್ಕೋ ಎಂಟನೇ ಸ್ಥಾನಕ್ಕೆ ಜಿಗಿದಿದೆ.

* ಚೀನಾದ ಆರು ಅತ್ಯಂತ ದುಬಾರಿ ನಗರಗಳೆಲ್ಲವೂ ಶ್ರೇಯಾಂಕಗಳನ್ನು ಹೆಚ್ಚಿಸಿಕೊಂಡಿವೆ, ಶಾಂಘೈ ಅಗ್ರ 20ರೊಳಗೆ ಪ್ರವೇಶಿಸಿದೆ. ಉಕ್ರೇನ್‌ನಲ್ಲಿನ ಯುದ್ಧ, ರಷ್ಯಾದ ಮೇಲಿನ ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳು, ಚೀನಾದ ಶೂನ್ಯ-ಕೋವಿಡ್ ನೀತಿ,  ಹೆಚ್ಚುತ್ತಿರುವ ಬಡ್ಡಿದರಗಳು ಮತ್ತು ವಿನಿಮಯ ದರದ ಬದಲಾವಣೆ ಇವೆಲ್ಲವೂ ಜೀವನ ವೆಚ್ಚದ ಮೇಲೆ ಪರಿಣಾಮ ಬೀರಿವೆ.

ಸಮೀಕ್ಷೆಯ ಪ್ರಕಾರ 172 ನಗರಗಳಲ್ಲಿ ಸರಾಸರಿ ಬೆಲೆ ಏರಿಕೆ, ಕಳೆದ 20 ವರ್ಷಗಳಲ್ಲೇ ಅಧಿಕವಾಗಿದೆ. ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಸಲಾದ ಸಮೀಕ್ಷೆಯು ಜಾಗತಿಕವಾಗಿ 172 ನಗರಗಳಲ್ಲಿ 200 ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು ಸೇವೆಗಳಲ್ಲಿ 400ಕ್ಕೂ ಹೆಚ್ಚು ವೈಯಕ್ತಿಕ ಬೆಲೆಗಳನ್ನು ಹೋಲಿಸುತ್ತದೆ.

ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿ ಇಲ್ಲಿದೆ

ಸಿಂಗಾಪುರ – 1

ನ್ಯೂಯಾರ್ಕ್, ಅಮೆರಿಕ – 1

ಟೆಲ್ ಅವಿವ್, ಇಸ್ರೇಲ್ – 3

ಹಾಂಗ್ ಕಾಂಗ್, ಚೀನಾ – 4

ಲಾಸ್ ಏಂಜಲೀಸ್, ಅಮೆರಿಕ – 4

ಜ್ಯೂರಿಚ್, ಸ್ವಿಟ್ಜರ್ಲೆಂಡ್ – 6

ಜಿನೀವಾ, ಸ್ವಿಟ್ಜರ್ಲೆಂಡ್ – 7

ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕ – 8

ಪ್ಯಾರಿಸ್, ಫ್ರಾನ್ಸ್ – 9

ಕೋಪನ್ ಹ್ಯಾಗನ್, ಡೆನ್ಮಾರ್ಕ್ – 10

ಸಿಡ್ನಿ, ಆಸ್ಟ್ರೇಲಿಯಾ – 10

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...