ಭಾರತದಲ್ಲಿ ಚಹಾವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಣದಿಂದಲೇ ಬೆಲೆಯೂ ಕಡಿಮೆ. ಸರಾಸರಿ ಒಂದು ಕೆಜಿ ಚಹಾ ಪುಡಿಯ ಬೆಲೆ 500 ರೂಪಾಯಿ ಇರಬಹುದು. ಕೋಟಿಗಟ್ಟಲೆ ಬೆಲೆ ಬಾಳುವ ಚಹಾಪುಡಿ ಕೂಡ ಚೀನಾದಲ್ಲಿದೆ. ವಿಶ್ವದ ಈ ದುಬಾರಿ ಚಹಾದ ಬೆಲೆ 1 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು. ಇದು ಚೀನಾದ ಫುಜಿಯಾನ್ ಪ್ರಾಂತ್ಯದ ವುಯಿ ಪರ್ವತಗಳಲ್ಲಿ ಕಂಡುಬರುತ್ತದೆ. ಈ ಚಹಾವನ್ನು ಕೊನೆಯ ಬಾರಿಗೆ 2005ರಲ್ಲಿ ಕೊಯ್ಲು ಮಾಡಲಾಯಿತು.
ಅದರ ಹೆಸರು ಡಾ ಹಾಂಗ್ ಪಾವೊ. ಕೆಲವೇ ಕೆಲವು ಗ್ರಾಂ ಚಹಾದ ಬೆಲೆ ಚಿನ್ನಕ್ಕಿಂತಲೂ ಹೆಚ್ಚು. 2002ರಲ್ಲಿ ಕೇವಲ 20 ಗ್ರಾಂ ಚಹಾವನ್ನು 180,000 ಯುವಾನ್ ಅಥವಾ ಸುಮಾರು 28,000 ಡಾಲರ್‌ಗೆ ಮಾರಾಟ ಮಾಡಲಾಯಿತು. ಅಪರೂಪ ಎಂಬ ಕಾರಣದಿಂದ ಈ ಚಹಾವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಲಾಗಿದೆ. ಇದು ಸಂಜೀವಿನಿಯೂ ಹೌದು. ಈ ಚಹಾ ಎಷ್ಟು ವಿಶೇಷವಾಗಿದೆ ಎಂದರೆ 1972 ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಚೀನಾಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ಅಧ್ಯಕ್ಷ ಮಾವೋ 200 ಗ್ರಾಂಗಳಷ್ಟು ಚಹಾವನ್ನು ಉಡುಗೊರೆಯಾಗಿ ನೀಡಿದ್ದರು.
ವಿಶ್ವದ ಅತ್ಯಂತ ದುಬಾರಿ ಚಹಾ ಡಾ ಹಾಂಗ್ ಪಾವೊ, ಹರಾಜಿನ ಮೂಲಕ ಮಾತ್ರ ಲಭ್ಯವಿದೆ. ಇದು ಅಪರೂಪದ ವಸ್ತುವಾಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ಚಹಾವನ್ನು ದಶಕಗಳ ಹಿಂದೆ ಚೀನಾದ ಸಿಚುವಾನ್‌ನ ಯಾನ್ ಪರ್ವತಗಳಲ್ಲಿ ಉದ್ಯಮಿಯೊಬ್ಬರು ಬೆಳೆಸಿದರು. ಮೊದಲ ಬ್ಯಾಚ್ನ 50 ಗ್ರಾಂ ಚಹಾ ಸುಮಾರು 2.90 ಲಕ್ಷ ರೂಪಾಯಿಗೆ ಮಾರಾಟವಾಯಿತು. ಚೀನಾದ ಮಿಂಗ್ ರಾಜವಂಶದ ಅವಧಿಯಲ್ಲಿ ಇದರ ಕೃಷಿ ಪ್ರಾರಂಭವಾಯಿತು.
ಆ ಸಮಯದಲ್ಲಿ ರಾಣಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದಳಂತೆ. ಆರೋಗ್ಯ ಸುಧಾರಣೆಗಾಗಿ ಈ ಟೀ ಕುಡಿಯಲು ರಾಜವೈದ್ಯರು ಸಲಹೆ ನೀಡಿದ್ದರು. ಈ ಚಹಾವನ್ನು ಕುಡಿದ ನಂತರ ರಾಣಿ ಸಂಪೂರ್ಣವಾಗಿ ಚೇತರಿಸಿಕೊಂಡಳು. ಇದಾದ ನಂತರ ರಾಜನು ಈ ಚಹಾಗಿಡಗಳನ್ನು ಇಡೀ ರಾಜ್ಯದಲ್ಲಿ ಬೆಳೆಯಲು ಆದೇಶಿಸಿದ್ದನು. ರಾಜನ ಉದ್ದನೆಯ ನಿಲುವಂಗಿಯಿಂದಾಗಿ ಈ ಚಹಾ ಎಲೆಗೆ ಡ-ಹಾಂಗ್ ಪಾವೊ ಎಂದು ಹೆಸರಿಸಲಾಯಿತು.